ಮೈಸೂರಿನ (Mysuru) ಉದಯಗಿರಿಯಲ್ಲಿ (Udayagiri) ನಿನ್ನೆ ಕ್ಷುಲ್ಲಕ ಕಾರಣಕ್ಕೆ ಎರಡು ಕೋಮುಗಳ ನಡುವೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿದೆ. ದೆಹಲಿಯಲ್ಲಿ (Delhi) ಬಿಜೆಪಿ (Bjp) ಗೆಲುವಿನ ಬಗ್ಗೆ ಅನ್ಯಕೋಮಿನ ಯುವಕ ಪೋಸ್ಟ್ ಮಾಡಿದ್ದ. ಇದೆ ಪೋಸ್ಟ್ ಗಲಾಟೆಗೆ ಕಾರಣವಾಗಿದೆ.ಹೀಗೆ ಸೋಷಿಯಲ್ ಮೀಡಿಯಾ (Social media) ಪೋಸ್ಟ್ ಮಾಡಿದ್ದಕ್ಕೆ ಗಲಾಟೆ ಆರಂಭವಾಗಿ, ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು ವಾಹನಗಳನ್ನು ಜಖಂಗೊಳಿಸಿದ್ದರು. ಈ ವೇಳೆ ಕೆಲವರಿಗೆ ಗಾಯಗಳಾಗಿತ್ತು.

ಈ ಪೋಸ್ಟ್ ವಿರುದ್ಧ ರೊಚ್ಚಿಗೆದ್ದ ಮತ್ತೊಂದು ಕೋಮಿನ ನೂರಾರು ಜನರು ಉದಯಗಿರಿಯ ಮುಖ್ಯರಸ್ತೆ ಹಾಗೂ ಪೊಲೀಸ್ ಠಾಣೆ ಮುಂದೆ ಗಲಾಟೆ ನಡೆಸಿದ್ರು. ತಕ್ಷಣ ಎಚ್ಚೆತ್ತ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಅಲ್ಲದೇ ಗಲಾಟೆಯನ್ನು ನಿಲ್ಲಿಸಲು ಫೈಯರ್ ಶೂಟ್ ಮಾಡಿ (Fire shoot), ಅಂದ್ರೆ ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಚದುರಿಸಿದ್ದಾರೆ.

ಆ ನಂತರ ಇಂದು ಬೆಳಿಗ್ಗೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಬಳಿ ಬಂದ ಮಾಜಿ ಸಂಸದ ಪ್ರತಾಪ್ ಸಿಂಹ (Prathap simha) ಘಟನೆ ಬಗ್ಗೆ ಮಾಹಿತಿ ಕಲೆಹಾಕಲು ಮುಂದಾದಾಗ ಅವರನ್ನು ಕೂಡಲೇ ಸ್ಥಳದಿಂದ ತೆರಳುವಂತೆ ಡಿಸಿಪಿ ಮುತ್ತುರಾಜ್ ಮನವಿ ಮಾಡಿದ್ದಾರೆ.ಸದ್ಯ ಪರಿಸ್ಥಿತಿ ಸರಿಯಿಲ್ಲ..ಹೀಗಾಗಿ ನೀವು ಠಾಣೆ ಬಳಿ ಇರಬೇಡಿ ಎಂದು ಮನವಿ ಮಾಡಿ ಪ್ರತಾಪ್ ಸಿಂಹರನ್ನು ಅಲ್ಲಿಂದ ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ವಾಪಸ್ ಕಳುಹಿಸಿದ್ದಾರೆ.