ಬೆಂಗಳೂರು:ನಗರದಲ್ಲಿ ಮಾಲಿನ್ಯ ನಿಯಂತ್ರಣ ತಡೆಯುವ ಸಂಬಂಧ ಬೆಂಗಳೂರು ನಗರ ಪೊಲೀಸ್ ಇಲಾಖೆಯಿಂದ ದೀಪಾವಳಿ ಹಬ್ಬದಂದು ಮಾರ್ಗಸೂಚಿ ಅನುಸರಿಸಿ ಪಟಾಕಿ ಹಚ್ಚುವಂತೆ ತಿಳಿಸಲಾಗಿತ್ತು.ಈ ನಿಯಮವನ್ನು ಉಲ್ಲಂಘಿಸಿ ಪಟಾಕಿ ಹಚ್ಚಿದವರಿಗೆ ಪೊಲೀಸ್ ಇಲಾಖೆ ಬಿಗ್ ಶಾಕ್ ನೀಡಿದೆ.
ಇಂದು ಬರೋಬ್ಬರಿ 56 ಪ್ರಕರಣ ದಾಖಲಿಸಿದೆ.:
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ನಗರ ಪೊಲೀಸರು ಮಾಹಿತಿ ಹಂಚಿಕೊಂಡಿದ್ದು, ದಿನಾಂಕ 31-10-2024ರಿಂದ ದಿನಾಂಕ 01-11-2024ರವರೆಗೆ ಸಂಜೆ 5 ಗಂಟೆಯವರೆಗೆ ಬೆಂಗಳೂರು ನಗರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದವರ ವಿರುದ್ಧ 56 ಕೇಸ್ ದಾಖಲಿಸಿರುವುದಾಗಿ ತಿಳಿಸಿದೆ.
ಬೆಂಗಳೂರು ಉತ್ತರ ವಲಯದಲ್ಲಿ 09, ದಕ್ಷಿಣ ವಲಯದಲ್ಲಿ 04, ಪೂರ್ವ ವಲಯದಲ್ಲಿ 06, ಈಶಾನ್ಯ 19, ಆಗ್ನೇಯ 09, ವೈಟ್ ಫೀಲ್ಡ್ 09 ಸೇರಿದಂತೆ 56 ಪ್ರಕರಣವನ್ನು ದಾಖಲಿಸಿರುವುದಾಗಿ ತಿಳಿಸಿದೆ.