ಕಳೆದ ಕೆಲವು ದಿನಗಳಿಂದ ನಗರದಲ್ಲಿ ಹೆಚ್ಚಾಗಿದ್ದ ಡಿಫೆಕ್ಷಿವ್ ಸೈಲೆನ್ಸ್ರ್ಗಳ ಹಾವಳಿಗೆ ತಕ್ಕ ಮಟ್ಟಿಗೆ ಬ್ರೇಕ್ ಹಾಕುವಲ್ಲಿ ಶಿವಮೊಗ್ಗ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದು.
ಶನಿವಾರ ನಗರದ ಶಿವಪ್ಪ ನಾಯಕ ಸರ್ಕಲ್ನಲ್ಲಿ ವಶಕ್ಕೆ ಪಡೆಯಲಾಗಿದ್ದ ಡಿಫೆಕ್ಟಿವ್, ಮಾಡಿಫೈಡ್ ಸೈಲೆನ್ಸ್ರ್, ಶ್ರಿಲ್ ಹಾರ್ನ್ಗಳನ್ನ ಪೊಲೀಸರು ಸಾರ್ವಜನಿಕರ ಎದುರೇ ರೋಲ್ ರೋಡರ್ ಹತ್ತಿಸಿ ನಾಶ ಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಶಿವಮೊಗ್ಗ ನಗರದಲ್ಲಿ ಮಾಡಿಫೈಡ್ ಅಥವಾ ಡಿಫೆಕ್ಟಿವ್ ಸೈಲೆನ್ಸರ್ ನಾಶ ಮಾಡುವ ಕೆಲಸವನ್ನು ಆರಂಭಿಸಿದ್ದೇವೆ. ವಾಹನಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಈ ಸೈಲೆನ್ಸರ್ ಗಳನ್ನ ಬಿಚ್ಚಿ ಕೊಟ್ಟಿದ್ದಾರೆ. ಅದನ್ನು ಬಳಕೆ ಮಾಡಬಾರದು ಎಂದು ನಮ್ಮ ಪೊಲೀಸ್ ಸಿಬ್ಬಂದಿ ಮನವರಿಕೆ ಮಾಡಿಕೊಟ್ಟಿದ್ದರು. ಈ ಸೈಲೆನ್ಸರ್ ಗಳನ್ನ ಎಸ್ ಎನ್ ಸರ್ಕಲ್ ನಲ್ಲಿ ನಾಶಪಡಿಸಲಾಗಿದೆ. ಅದರ ಜೊತೆಗೆ ಶ್ರಿಲ್ ಹಾರ್ನ್ ಗಳನ್ನ ಸ್ಟಾಪ್ ನಾಯ್ಸ್ ( stop noise) ಎನ್ನುವ ಕಾನ್ಸೆಪ್ಟ್ ಇಟ್ಟುಕೊಂಡು ನಾಶಪಡಿಸಲಾಗಿದೆ. ಇದೇ ತರಹ ನಮ್ಮ ತಾಲೂಕು ಕೇಂದ್ರಗಳಲ್ಲಿ ಉಪ ವಿಭಾಗ ಕೇಂದ್ರಗಳಲ್ಲಿಯೂ ವಶಪಡಿಸಿಕೊಂಡ ವಸ್ತುಗಳನ್ನ ನಾಶಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪದೇಪದೇ ಕೆಲವರು ಈ ಸೈಲೆನ್ಸರ್ ಗಳನ್ನ ಹಾಕಿಸುತ್ತಾರೆ. ನಾವು ವಶಪಡಿಸಿಕೊಂಡರು ಪುನಃ ಬಳಕೆ ಮಾಡುತ್ತಾರೆ. ಅದನ್ನು ನಾವು ನಿರಂತರ ಕಾರ್ಯಾಚರಣೆ ಮೂಲಕ ತಡೆಹಿಡಿಯುವ ಕೆಲಸ ಮಾಡುತ್ತೇವೆ. ವಾಹನಗಳಿಗೆ ಸೈಲೆನ್ಸರ್ ಗಳನ್ನ ಮಾಡಿಫೈಡ್ ಮಾಡಿ ಹಾಕಿಸುವುದರಿಂದ ವಾಹನಗಳ ಮೈಲೇಜ್ ಕೂಡ ಕಡಿಮೆಯಾಗುತ್ತೆ. ಆರ್ ಟಿ ಓ ( RTO) ನಿಯಮಗಳ ಅನುಸಾರ ಹಾಗೆ ಮಾಡುವಂತಿಲ್ಲ. ಶಬ್ದ ಹೆಚ್ಚು ಬರೋದ್ರಿಂದ ಶಬ್ದ ಮಾಲಿನ್ಯ ಕೂಡ ಉಂಟಾಗುತ್ತೆ. ವಯಸ್ಕರು ರೋಗಿಗಳಿಗೆ ಬಹಳ ತೊಂದರೆ ಆಗುತ್ತೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪೊಲೀಸರು ಇಂತಹ ಕಾರ್ಯಾಚರಣೆಗಳನ್ನು ಮಾಡುತ್ತಾರೆ. ಶಿವಮೊಗ್ಗ ನಗರದಲ್ಲಿ ಸುಮಾರು 70 ಡಿಫೆಕ್ಟಿವ್ ಸೈಲೆನ್ಸರ್ ಹಾಗೂ 40 ಸಿಂಗ್ ಹಾರ್ನ್ ನಾಶಪಡಿಸಲಾಗಿದೆ. ತಾಲೂಕುಗಳಲ್ಲಿಯೂ ಈ ಪ್ರಮಾಣದ ಸೈಲೆನ್ಸರ್ ನಾಶ ಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.