KSRTC ಮಳಿಗೆಯ ಬಾಕಿ ವಸೂಲಿಗೆಂದು ಹೋಗಿದ್ದ ಅಧಿಕಾರಿಗಳಿಗೆ ಮಚ್ಚು ತೋರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಬೆಂಬಲಿಗರಾದ ಶಫೀಕ್ ಅಹಮದ್ ಹಾಗೂ ಆತನ ಪತ್ನಿ ಸೈಯದ್ ಮುನೀಬುನ್ನೀಸಾರನ್ನು ಬಂಧಿಸುವಲ್ಲಿ ಮೈಸೂರಿನ ಉದಯಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಡಿಸೆಂಬರ್ 12ರಂದು ಸಾರಿಗೆ ಅಧಿಕಾರಿ ಮರಿಗೌಡರಿಗೆ ಮಚ್ಚು ತೋರಿಸಿ ಬೆದರಿಕೆ ಹಾಕಿದ್ದ ಆರೋಪಿಗಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮಾರಿಸಿಕೊಂಡಿದ್ದ ಆರೋಪಿಗಳನ್ನ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು ಮತ್ತು ಘಟನೆ ನಡೆದ ನಾಲ್ಕು ದಿನಗಳ ಒಳಗಾಗಿ ಪೊಲೀಸರು ಬಂಧಿಸಿದ್ದಾರೆ.

ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸಾತಗಳ್ಳಿ ಬಸ್ ಡಿಪೋಗೆ ಸೇರಿದ್ದ ವಾಣಿಜ್ಯ ಸಂಕೀರ್ಣವನ್ನ ಷಫೀಕ್ ಅಹಮದ್ ಗೆ 12 ವರ್ಷಗಳ ಅವಧಿಗೆ ಬಾಡಿಗೆಗೆ ನೀಡಲಾಗಿತ್ತು.ನಿಗದಿತ ಸಮಯಕ್ಕೆ ಬಾಡಿಗೆ ಪಾವತಿಸದೆ ನ್ಯಾಯಾಲಯದ ಮೊರೆ ಹೋಗಿದ್ದ ಶಫೀಕ್ ಮಧ್ಯಂತರ ತಡೆಯಾಜ್ಞೆ ಪಡೆದಿದ್ದ.ನಂತರದ ದಿನಗಳಲ್ಲಿ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆಯನ್ನ ರದ್ದುಪಡಿಸಿತ್ತು.
ಈ ಹಿನ್ನಲೆ ವಾಣಿಜ್ಯ ಸಂಕೀರ್ಣವನ್ನ ವಶಕ್ಕೆ ಪಡೆಯಲು ಕೆ.ಎಸ್.ಆರ್.ಟಿ.ಸಿ.ವಿಭಾಗೀಯ ಸಂಚಲನಾಧಿಕಾರಿ ಮರಿಗೌಡ ರವರ ಇತರ ಅಧಿಕಾರಿಗಳ ಜೊತೆ ತೆರಳಿದ್ದ ವೇಳೆ ಇಬ್ಬರು ಮಹಿಳೆಯರ ಜೊತೆ ಬಂದ ಸೈಯದ್ ಮುನಿಬುನ್ನೀಸಾ ಮಚ್ಚು ತೋರಿಸಿ ಧಂಕಿ ಹಾಕಿದ್ದರು.ಮರ್ಡರ್ ಮಾಡಿ ಜೈಲಿಗೆ ಹೋಗುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದರು.ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು.