ಶಿವಮೊಗ್ಗದಲ್ಲಿ ಎಟಿಎಂ ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಹಾರ ಮೂಲದ ಆರೋಪಿ ಓರ್ವನ ಬಂಧನವಾಗಿದೆ.ಈ ಘಟನೆ ನಡೆದ ಅರ್ಧ ಗಂಟೆ ಒಳಗೆ ಆರೋಪಿಯನ್ನ ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಮಹಮ್ಮದ್ ವಸೀಂ (22) ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ನೆಹರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ನ ಎಟಿಎಂ ದರೋಡೆಗೆ ಯತ್ನಿಸಿದ ಮಹಮದ್ ವಸೀಂ ಯತ್ನಿಸಿದ್ದ. ಎಟಿಎಂ ನಲ್ಲಿ ದರೋಡೆ ಮಾಡುವ ವೇಳೆ ಸೈರನ್ ಬಾರಿಸುತ್ತಿದ್ದಂತೆ ಪರಾರಿಯಾಗಿದ್ದ ಮೊಹಮ್ಮದ್ ವಸೀಂ ನನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಈ ಪ್ರಕರಣದಲ್ಲಿ ಕೂಡಲೇ ಕಾರ್ಯಪ್ರವೃತ್ತರಾದ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯ ಪೊಲೀಸರು, ಕಾಂಕ್ರೀಟ್ ಕೆಲಸಕ್ಕೆ ಎಂದು ಬಂದಿದ್ದ ಮೊಹಮ್ಮದ್ ವಸೀಂ ನನ್ನ ಬಂಧಿಸಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆದಿದ್ದ ಕಾಮಗಾರಿಯಡಿ ಕೆಲಸ ಮಾಡಲು ವಸೀಂ ಬಂದಿದ್ದ ಎನ್ನಲಾಗಿದೆ. ಗಾರ್ಡನ್ ಏರಿಯಾದಲ್ಲಿ ಸಹೋದರಿ ಜೊತೆ ವಾಸವಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.