ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ(BS Yediyurappa) ವಿರುದ್ಧ ಮಹಿಳೆ ಫೋಕ್ಸೋ(POCSO) ಪ್ರಕರಣ ದೂರು ದಾಖಲಿಸಿದ್ದಾರೆ. ತಮ್ಮ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವಾಗಿದ್ದು, ಈ ವಿಚಾರವಾಗಿ ನ್ಯಾಯ ಕೇಳಲು ಯಡಿಯೂರಪ್ಪ ಮನೆಗೆ ಹೋಗಿದ್ವಿ. ಈ ವೇಳೆ ಬಿಎಸ್ ಯಡಿತೂರಪ್ಪ ಸುಮಾರು 9ನಿಮಿಷಗಳ ಕಾಲ ನಮ್ಮ ಬಳಿ ಮತನಾಡಿದ್ರು. ನಂತರ ನನ್ನ ಅಪ್ರಾಪ್ತ ಮಗಳ ಕೈ ಹಿಡಿದು ಕೊಂಡು ರೂಮ್‌ಗೆ ಕರೆದುಕೊಂಡು ಹೋಗಿ ಡೋರ್ ಲಾಕ್(Door Lock) ಮಡಿ ಐದು ನಿಮಿಷ ಬಿಟ್ಟು ಹೊರಗೆ ಬಂದ್ರು.ಈ ವೇಳೆ ನನ್ನ ಮಗಳ ಖಾಸಗಿ ಅಂಗಗಳನ್ನ ಮುಟ್ಟಿ ಲೈಂಗಿಕ ದೌರ್ಜನ್ಯ ನೀಡಿದ್ದಾರೆಂದು ಬಾಲಕಿಯ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಮಹಿಳೆ ದೂರಿನನ್ವಯ ಸದಾಶಿವನಗರ ಠಾಣೆಯಲ್ಲಿ ಬಿಎಸ್ ಯಡಿಯೂರಪ್ಪ(BS Yediyurappa) ವಿರುದ್ಧ ಫೋಕ್ಸೋ ಪ್ರಕರಣ(Case) ದಾಖಲಾಗಿದೆ. ಇನ್ನೂ ದೂರುದಾರೆ ಮಹಿಳೆ ಈ ಹಿಂದೆ ಸಾಕಷ್ಟು ದೂರುಗಳನ್ನ ಇದೇ ರೀತಿ ನೀಡಿದ್ದು ಕಂಡುಬಂದಿದೆ. ಸದ್ಯ ಪೊಲೀಸ್ರು ಪ್ರಕರಣದ ಸತ್ಯಾಸತ್ಯೆಯನ್ನ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
#BSYediyurappa #BSYKarnataka #FormerCM #POCSO