ತುಮಕೂರು (Tumakuru): ಚಿತ್ರದುರ್ಗದ (chitradurga) ಮುರುಘಾ ಶ್ರೀ (Muruga Shri) ಪಕ್ರರಣ ಮಾಸುವ ಮುನ್ನವೇ ಮತ್ತೊಬ್ಬ ಸ್ವಾಮೀಜಿ ಪೋಕ್ಸೋ ಕಾಯ್ದೆಯಡಿ ಪೊಲೀಸರ ಅತಿಥಿಯಾಗಿದ್ದಾರೆ.
ಕುಣಿಗಲ್ (Kunigal) ತಾಲೂಕಿನ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಮಂಜುನಾಥ ಸ್ವಾಮೀಜಿಯನ್ನು (Shri Balamanjunatha Swamiji) ಪೊಲೀಸರು (Police) ಬಂಧಿಸಿದ್ದಾರೆ.
ಕಳೆದ ಫೆಬ್ರವರಿ 10 ರಂದು ತುಮಕೂರು ಸೈಬರ್ ಪೊಲೀಸ್ (tumakuru Cyber police) ಠಾಣೆಯಲ್ಲಿ ಸ್ವಾಮೀಜಿ ವಿರುದ್ಧ ಎಫ್ಐಆರ್ (FIR) ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ನಿನ್ನೆ ತಡರಾತ್ರಿ ಆರೋಪಿತ ಸ್ವಾಮೀಜಿಯನ್ನು ಬಂಧಿಸಿದ್ದಾರೆ.
ವಿದ್ಯಾಚೌಡೇಶ್ವರಿ ಮಠದಲ್ಲಿ ಅಭಿಲಾಷ್ ಮತ್ತು ಅಭಿಷೇಕ್ ಎಂಬುವವರು ಸ್ವಾಮೀಜಿ ಜೊತೆ ಸೇವೆ ಸಲ್ಲಿಸುತ್ತಿದ್ದರು. ಇವರಲ್ಲಿ ಅಭಿಷೇಕ್ ಎಂಬ ವ್ಯಕ್ತಿಗೆ ಸ್ವಾಮೀಜಿ ಜೊತೆ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಮಠವನ್ನು ತೊರೆದಿದ್ದರು. ಈ ಘಟನೆ ನಡೆದ ಬಳಿಕ ‘ಚರ್ಮ ರೋಗಕ್ಕೆ ಚಿಕಿತ್ಸೆ ಕೊಡುವ ನೆಪದಲ್ಲಿ ನನ್ನ ಬೆತ್ತಲೆ ವಿಡಿಯೋ ಮಾಡಿಕೊಂಡು ನನ್ನನ್ನು ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆಂದು ಆರೋಪಿಸಿ ಅಭಿಷೇಕ್ ಅಂಡ್ ಟೀಂ ವಿರುದ್ಧ ಸ್ವಾಮೀಜಿ ದೂರು ದಾಖಲಿಸಿದ್ದರು.
ಈ ಸಂಬಂಧ ಒಟ್ಟು 6 ಜನರ ಮೇಲೆ ಎಫ್ಐಆರ್ ದಾಖಲಾಗಿತ್ತು. ಪೊಲೀಸರು ಅಭಿಷೇಕ್ ಅಂಡ್ ಟೀಂ ಅನ್ನು ವಿಚಾರಣೆಗೆ ಒಳಪಡಿಸಿದೆ. ತೀವ್ರ ತನಿಖೆ ವೇಳೆ ಅಭಿಷೇಕ್, ಶ್ರೀಗಳ ವಿರುದ್ಧ ಪ್ರತಿಯಾಗಿ ದೂರು ನೀಡುತ್ತಾರೆ. ಸ್ವಾಮೀಜಿ ಮಠದಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.
ಜೊತೆಗೆ ವಿಚಾರಣೆ ವೇಳೆಯೂ ಶ್ರೀಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅಂತೆಯೇ ಅಭಿಷೇಕ್ ಕೊಟ್ಟ ಮಾಹಿತಿ ಮೇರೆಗೆ ಪೊಲೀಸರು ಗುರುವಾರ ತಡರಾತ್ರಿ ಮಠಕ್ಕೆ ತೆರಳಿದ್ದಾರೆ. ಪರಿಶೀಲನೆ ಬಳಿಕ ಬಾಲಮಂಜುನಾಥ ಸ್ವಾಮೀಜಿ ಹಾಗೂ ಆತನ ಆಪ್ತ ಸಹಾಯಕ ಅಭಿಲಾಷ್ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿಕೊಂಡು ಬಂಧಿಸಿದ್ದಾರೆ.
ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದ್ದು, ತುಮಕೂರು ಎಸ್ಪಿ ಅಶೋಕ್ ಕೆವಿ ನೇತೃತ್ವದಲ್ಲಿ ಸ್ವಾಮೀಜಿಯ ಬಂಧನ ಆಗಿದೆ. ಪ್ರಕರಣದ ಹೆಚ್ಚಿನ ತನಿಖೆಯನ್ನ ಪೊಲೀಸರು ಕೈಗೊಂಡಿದ್ದಾರೆ.
#tumakuru #kunigal #balamanjunathaswamiji #swamijiarrest #police