‘ಲೋಕ’ ಮತಶಿಕಾರಿಯಲ್ಲಿ ತೊಡಗಿರುವ ಪಿಎಂ ಮೋದಿ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಸರ್ಕಾರ ದೇಶದಲ್ಲಿ ಅಭಿವೃದ್ಧಿ ಮಾಡುತ್ತಲೇ ಹೋಗುತ್ತಿದೆ. ಆದರೆ, ಬಿಜೆಪಿ ಸರ್ಕಾರದ ಕೆಲಸವನ್ನು ಕಾಂಗ್ರೆಸ್ ಹಾಳು ಮಾಡಲು ಪ್ರಯತ್ನ ಪಡುತ್ತಲೇ ಇದೆ. ಈಗ INDI Alliance ಹೊಸ ಫಾರ್ಮೂಲಾವನ್ನು ಮಾಡಿಕೊಂಡು ರಾಜಕೀಯವನ್ನು ಮಾಡುತ್ತಿದ್ದಾರೆ. INDI ಒಕ್ಕೂಟಕ್ಕೆ ಅಧಿಕಾರ ಸಿಕ್ಕರೆ ಒಂದೊಂದು ವರ್ಷಕ್ಕೆ ಒಬ್ಬೊಬ್ಬರು ಪ್ರಧಾನಿ ಆಗುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಕಿಡಿಕಾರಿದ್ದಾರೆ.
ದಾವಣಗೆರೆಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮೊದಲ ವರ್ಷಕ್ಕೆ ಒಬ್ಬರು ಪ್ರಧಾನಿ, ಎರಡನೇ ವರ್ಷಕ್ಕೆ ಒಬ್ಬರು, ಮೂರನೇ ವರ್ಷಕ್ಕೆ, ನಾಲ್ಕನೇ ಹಾಗೂ ಐದನೇ ವರ್ಷಕ್ಕೆ ಒಬ್ಬೊಬ್ಬರು ಪ್ರಧಾನಿಯಾಗುತ್ತಾರೆ. ಹೀಗೆ 5 ವರ್ಷ ಕಾಲ ದೇಶವನ್ನು ಒಬ್ಬರ ಕೈಗೆ ಕೊಡುವಾಗ ನೀವು ಯೋಚನೆ ಮಾಡುತ್ತೀರಲ್ಲವೇ? ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಮಾಡಿದರು.
ಕರ್ನಾಟಕ ಶಿಕ್ಷಣ ನೀತಿಯಲ್ಲಿ ಕಾಂಗ್ರೆಸ್ ಮಾಡಿದ್ದು ವೋಟ್ ಬ್ಯಾಂಕ್ ರಾಜಕೀಯವಾಗಿದೆ. ಕರ್ನಾಟಕ ಯುವಕರು, ವಿದ್ಯಾರ್ಥಿಗಳ ವಿಚಾರದಲ್ಲೂ ಕಾಂಗ್ರೆಸ್‌ನಿಂದ ರಾಜಕೀಯ ನಡೆದಿದೆ. ಕರ್ನಾಟಕದ ಆರೋಗ್ಯ ಹಾಗೂ ನೀರಾವರಿ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಪಾಲಿಟಿಕ್ಸ್ ಮಾಡಲಾಗಿದೆ. ಭಗವಾನ್ ಬಸವೇಶ್ವರರ ನಾಡಿನಲ್ಲಿ ಪ್ರಜಾಪ್ರಭುತ್ವಕ್ಕೆ ಮಾರಕವಾದ ರಾಜಕೀಯ ನಡೆಯುತ್ತಿದೆ. ಅತಿ ದೊಡ್ಡ ಪಾಪದ ಕೆಲಸದಲ್ಲಿ ಕಾಂಗ್ರೆಸ್ ತೊಡಗಿಕೊಂಡಿದೆ. ಎಸ್‌ಸಿ, ಎಸ್‌ಟಿ ಅಭಿವೃದ್ಧಿ ವಿಚಾರದಲ್ಲೂ ಕಾಂಗ್ರೆಸ್ ಹಗರಣ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.