ಲೋಕಸಭೆ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಭರ್ಜರಿ ಜಯ ಸಾಧಿಸಿದ್ದಾರೆ .ವಾರಣಾಸಿ ಕ್ಷೇತ್ರದಲ್ಲಿ 1,52, 513 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ವಿರುದ್ದ ಗೆಲುವು ಸಾಧಿಸುವ ಮೂಲಕ 3 ನೇ ಬಾರಿ ಆಯ್ಕೆಯಾಗಿದ್ದಾರೆ. 2014 ಹಾಗೂ 2019ರಲ್ಲಿ ಇದೇ ವಾರಾಣಸಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಈ ಬಾರಿಯೂ ಗೆಲುವಿನ ನಗೆ ಬೀರುವ ಮೂಲಕ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ.
ಪ್ರಾರಂಭದ ಕೆಲವು ಸುತ್ತುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ಅವರು ಮುನ್ನಡೆ ಸಾಧಿಸಿದ್ದರು. 2014 ಹಾಗೂ 2019ರಲ್ಲಿಯೂ ಕಾಂಗ್ರೆಸ್ ಅಜಯ್ ರೈ ಅವರನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಎರಡೂ ಸಲವೂ ಅಜಯ್ ಅವರು ಮೋದಿ ವಿರುದ್ಧ ಸೋಲನಭವಿಸಿದ್ದರು. ಆದರೂ ಈ ಬಾರಿ ಮತ್ತೆ ಮೋದಿ ವಿರುದ್ಧವೇ ಕಣಕ್ಕಿಳಿದಿದ್ದರು. ಇದೀಗ ಮೂರನೇ ಬಾರಿಯೂ ಸೋಲನಭವಿಸಿದ್ದಾರೆ
ಕಾಮಿಡಿ ಅಲ್ಲ ಈಗ ಲಾಂಗ್ “ಇಡಕೊಂಡು” ಬರ್ತೀನಿ..!
https://youtu.be/g2sGN51cQfY?si=QOeIP1cUgyNaTMIG
Read more