ದೇಶದ ಆರ್ಥಕತೆ ವೈಫಲ್ಯಕ್ಕೆ 2016ರ ನವೆಂಬರ್ 8ರಂದು ಪ್ರಧಾನಿ ಮೋದಿ ನೋಟುಗಳ ಅಮಾನ್ಯೀಕರಣದ ಮಹಾವೈಫಲ್ಯವನ್ನ ಪ್ರಧಾನಿ ಮೋದಿ ಇನ್ನು ಒಪ್ಪಿಕೊಂಡಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ನವೆಂಬರ್ 7ಕ್ಕೆ ನೋಟುಗಳ ಅಮಾನ್ಯೀಕರಣಕ್ಕೆ 6 ವರ್ಷಗಳಾಗಲಿದ್ದು ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಖರ್ಗೆ ಆರ್ಥಿಕತೆಯ ಕುಸಿತಕ್ಕೆ ಕಾರಣವಾದ ಈ ಮಹಾವೈಫಲ್ಯವನ್ನು ಪ್ರಧಾನಿ ಇನ್ನೂ ಒಪ್ಪಿಕೊಂಡಿಲ್ಲ ಎಂದು ಕಿಡಿಕಾರಿದ್ದಾರೆ.
2016 ನವೆಂಬರ್ 8ರ ರಾತ್ರಿ 8ಘಂಟೆಗೆ ಪ್ರಧಾನಿ ನರೇಂದರ ಮೋದಿ ವಿಶೇಷ ಸುದ್ದಿಗೋಷ್ಠಿ ನಡೆಸಿ ಭ್ರಷ್ಟಾಚಾರ ಹಾಘು ಕ್ಪುಹಣವನ್ನ ತಡೆಗಟ್ಟುವ ಸಲುವಾಗಿ 500 ಹಾಗೂ 1,000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದು ಮಾಡಲಾಗಿದೆ ಎಂದು ಹೇಳಿದ್ದರು.