IT ದಾಳಿಯಲ್ಲಿ 200 ಕೋಟಿ ನಗದು ವಶಪಡಿಸಿಕೊಂಡ ಬಳಿಕ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ನ್ನು ಗುರಿಯಾಗಿಸಿ ಟ್ವೀಟಿಸಿದ್ದಾರೆ.
‘ದೇಶವಾಸಿಗಳೇ ಈ ನೋಟುಗಳ ಕಟ್ಟನ್ನು ನೋಡಿ ಮತ್ತು ಬಳಿಕ ಅವರ ನಾಯಕರ ಭಾಷಣಗಳನ್ನು ಕೇಳಿ. ಜನರಿಂದ ಏನನ್ನು ಲೂಟಿ ಮಾಡಲಾಗಿದ್ಯೆಯೋ ಅವುಗಳ ಪೈಸೆ-ಪೈಸೆಯನ್ನೂ ವಸೂಲಿ ಮಾಡಲಾಗುತ್ತದೆ, ಇದು ಮೋದಿಯ ಗ್ಯಾರಂಟಿ’- ಅಂತ ಮೋದಿ ಟ್ವೀಟಿಸಿದ್ದಾರೆ .
ಜಾರ್ಖಂಡ್‌ನಿಂದ ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಸಂಸದ ಧೀರಜ್ ಸಾಹುಗೆ ಸೇರಿದ 10 ಸ್ಥಳಗಳ ಮೇಲೆ IT ದಾಳಿ ನಡೆಸಿತ್ತು. ಈ ವೇಳೆ ಅಲ್ಮೇರಾಗಳಲ್ಲಿ ಅಡಗಿಸಿಟ್ಟಿದ್ದ 200 ಕೋಟಿ ರೂಪಾಯಿ ಮೊತ್ತದ ನೋಟುಗಳ ಕಂತೆಗಳನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದೆ.
ಒಡಿಶಾ ರಾಜ್ಯದ 4 ಕಡೆ, ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ, ಜಾರ್ಖಂಡ್‌ನ 2 ಕಡೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. 157 ಬ್ಯಾಗ್‌ಗಳಲ್ಲಿ ತುಂಬಿಸಿಕೊಂಡು ಟ್ರಕ್‌ಗಳಲ್ಲಿ ಈ ಹಣವನ್ನು ಬ್ಯಾಂಕ್‌ಗಳಿಗೆ ರವಾನಿಸಲಾಯಿತು.
9 ಅಲ್ಮೇರಾಗಳಲ್ಲಿ 500, 200, 100 ರೂಪಾಯಿ ಮುಖಬೆಲೆಯ ನೋಟುಗಳ ಕಂತೆಗಳು ಪತ್ತೆಯಾಗಿದ್ದವು. ನೋಟುಗಳನ್ನು ಎಣಿಸಲು ಎರಡೂವರೆ ದಿನ ಬೇಕಾಯಿತು ಮತ್ತು ಎಣಿಕೆಗೆ ತಂದಿದ್ದ ಎಣಿಕಾ ಯಂತ್ರ ಕೂಡಾ ಕೆಟ್ಟು ಹೋಗಿತ್ತು ಎಂದು ದೈನಿಕ್ ಭಾಸ್ಕರ್ ಪ್ರಕಟಿಸಿರುವ ವರದಿಯನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ.






