ಇತ್ತೀಚೆಗಷ್ಟೇ ಪುನರಾರಂಭಗೊಂಡಿರುವ ಗುಜರಾತ್‌ನ ಮೋರ್ಬಿಯಲ್ಲಿರುವ ತೂಗು ಸೇತುವೆ ಕುಸಿದು ಬಿದ್ದಿದ್ದು ಕನಿಷ್ಟ 141 ಮಂದಿ ಮೃತಪಟ್ಟಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. ಸೇತುವೆ ಕುಸಿಯುವಾಗ ಸೇತುವೆ ಮೇಲೆ ಸುಮಾರು 500 ಮಂದಿ ಇದ್ದರು ಎಂದು ಮಾಧ್ಯಮಗಳ ವರದಿ ಹೇಳಿದೆ.
ಮೋರ್ಬಿ ತೂಗು ಸೇತುವೆಯು ಹಲವು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ದುರಸ್ತಿ ಮತ್ತು ನವೀಕರಣದ ನಂತರ, ಕೇವಲ ನಾಲ್ಕು ದಿನಗಳ ಹಿಂದೆ, ಅಕ್ಟೋಬರ್ 26 ರಂದು ಗುಜರಾತಿ ಹೊಸ ವರ್ಷದ ಸಂದರ್ಭದಲ್ಲಿ ಪುನರಾರಂಭಿಸಲಾಗಿತ್ತು.
ಇನ್ನು ಘಟನೆ ನಡೆದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಧ್ಯಾಹ್ನ ಬೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನ ಘೋಷಿಸಿರುವ ಪ್ರಧಾನಿ ಗಾಯಾಳುಗಳಿಗೆ 50 ಸಾವಿರ ರೂಪಾಯಿಯನ್ನು ಘೋಷಿಸಿದ್ದಾರೆ.