ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul gandhi) ನಿನ್ನೆ (ಜು.25) ಪ್ರಧಾನಿ ನರೇಂದ್ರ ಮೋದಿ (Pm modi) ಅವರನ್ನು ಕೇವಲ ಶೋ ಮ್ಯಾನ್ ರೀತಿ ಮಾತ್ರ, ಅವರ ಬಳಿ ಯಾವುದೇ ವಿಚಾರವಿಲ್ಲ ಎಂದು ಪ್ರಧಾನಿ ಮೋದಿಯನ್ನು ಟೀಕಿಸಿದ್ದಾರೆ. ದೆಹಲಿಯ (Delhi) ಟಾಲ್ಕಟೋರಾ ಕ್ರೀಡಾಂಗಣದಲ್ಲಿ ಈ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ” ಮೋದಿ ಕೇವಲ ಒಂದು ದೊಡ್ಡ ಶೋ ಆಫ್ ಮಾಡುವ ವ್ಯಕ್ತಿ, ಆದ್ರೆ ಸುಖಾಸುಮ್ಮನೆ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯವರನ್ನು ಅತಿ ವೈಭವೀಕರಿಸುವ ಕುರಿತು ಮಾತನಾಡಿದ ರಾಗಾ, ಎರಡು ಮೂರು ಬಾರಿ ಮೋದಿಯನ್ನು ಭೇಟಿಯಾಗಿ ಅವರ ಜೊತೆ ಒಂದೇ ಕೋಣೆಯಲ್ಲಿ ಕುಳಿತ ನಂತರ, ಪ್ರಧಾನಿ ಮೋದಿ ಎಂದಿಗೂ ನಮಗೆ ರಾಜಕೀಯವಾಗಿ ದೊಡ್ಡ ಸಮಸ್ಯೆ ಅಥವಾ ಸವಾಲು ಅಲ್ಲವೇ ಅಲ್ಲ ಎಂದು ತಾವು ಭಾವಿಸಿರುವುದಾಗಿ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ.

ಇನ್ನು ಮುಂದುವರೆದಂತೆ ಮಾತನಾಡಿದ ರಾಹುಲ್ ಗಾಂಧಿ ಅವರು ಮೋದಿಗೆ”ದಮ್ ನಹೀಂ ಹೈ” ಅಂದ್ರೆ ಮೋದಿಗೆ ದಮ್ ಇಲ್ಲ ಎಂದಿದ್ದಾರೆ. ಪ್ರಧಾನಿ ಮೋದಿ ಬಹಳ ದೊಡ್ಡ ವ್ಯಕ್ತಿ ಅಥವಾ ವಿಷಯವಲ್ಲ. ಕೇವಲ ಮಾಧ್ಯಮಗಳು ಅವರನ್ನು ಮಿತಿಮೀರಿ ಹಿಗ್ಗಿಸಿ, ವೈಭವೀಕರಿಸಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.