ಬೆಂಗಳೂರು: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಎಂದಿನಂತೆ ಭವ್ಯ ಸ್ವಾಗತ ಸಿಕ್ಕಿದೆ. ಅಲ್ಲಿನ ಅಧ್ಯಕ್ಷ ಜೋ ಬೈಡೆನ್ (Joe Biden) ಮತ್ತು ಪ್ರಧಾನಿ ಮೋದಿ ನಡುವೆ ಉತ್ತಮ ಬಾಂಧವ್ಯ ಇದೆ.

ಪ್ರಧಾನಿ ನರೇಂದ್ರ ಮೋದಿ ಯಾವುದೇ ದೇಶಕ್ಕೆ ಪ್ರವಾಸ ಹೋದರೂ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಉಡುಗೊರೆಗಳನ್ನು ಆಯಾ ದೇಶಗಳ ಗಣ್ಯರಿಗೆ ನೀಡುತ್ತಾರೆ. ಈ ಬಾರಿಯೂ ಅವರು ಕರ್ನಾಟಕದ ಶ್ರೀಗಂಧ ಮರದ ಕಟ್ಟಿಗೆಯಿಂದ ತಯಾರಿಸಿರುವ ಗಂಧದ ಪರಿಮಳದಿಂದ ಘಮಘಮಿಸುವ ಪೆಟ್ಟಿಗೆ (sandalwood box) ಜೊತೆಗೆ ಬೇರೆ ಹಲವು ಉಡುಗೊರೆಗಳನ್ನು ಬೈಡೆನ್ ಮತ್ತು ಅವರ ಪತ್ನಿಗೆ ನೀಡಿದ್ದಾರೆ.


ವಾಷಿಂಗ್ಟನ್ ಡಿಸಿಯಲ್ಲಿರುವ ವೈಟ್ ಹೌಸ್ ನಲ್ಲಿ ಪ್ರಧಾನಿ ಮೋದಿ ಯುಎಸ್ ಪ್ರಥಮ ಪ್ರಜೆ ಹಾಗೂ ಅವರ ಪತ್ನಿಗೆ ಗಿಫ್ಟ್ ಗಳ ಜೊತೆಗೆ ಅವುಗಳ ವಿವರಣೆ ನೀಡಿದ್ದಾರೆ.