Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

PM Modi.. Do you Collect toll without Service? Democracy is being Destroyed By your Government : ಮೋದಿ ಏನಪ್ಪಾ ನಿಂದು ಅಂಧ ದರ್ಬಾರ್ ? ಸೇವೆಯೇ ಇಲ್ಲದೆ ಟೋಲ್ ಸಂಗ್ರಹ ಮಾಡ್ತೀರಾ ? ನಿಮ್ಮ ಸರ್ಕಾರದಿಂದ ಪ್ರಜಾಪ್ರಭುತ್ವ ಹಾಳಾಗುತ್ತಿದೆ : ಎಚ್.ವಿಶ್ವನಾಥ್

ಪ್ರತಿಧ್ವನಿ

ಪ್ರತಿಧ್ವನಿ

March 17, 2023
Share on FacebookShare on Twitter

ಮೈಸೂರು: ಮಾ:17: ಬೆಂಗಳೂರು ಎಕ್ಸ್ ಪ್ರೆಸ್ ಹೈವೇಯಲ್ಲಿ ಅವೈಜ್ಞಾನಿಕ ಟೋಲ್ ದರ ಸಂಗ್ರಹ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ , ಮೈಸೂರಿನ ಮಣಿಪಾಲ್ ವೃತ್ತದ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಎಕ್ಸ್ ಪ್ರೆಸ್ ಹೈವೇ ನಿರ್ಮಾಣ ಹಿನ್ನೆಲೆ 2600 ಎಕರೆ ರೈತರ ಜಮೀನು ಹೋಯ್ತು. ಮಂಡ್ಯ ಭಾಗದ ನೂರಾರು ಕುಟುಂಬಗಳು‌ ಬೀದಿಗೆ ಬಂದಿದೆ ಜನ ವಿರೋಧಿ ಯೋಜನೆ ಮಾಡಿ ಟೋಲ್ ಸಂಗ್ರಹ ನೆಪದಲ್ಲಿ ಹಗಲು ದರೋಡೆಗೆಳಿದಿದ್ದೀರಿ ರಸ್ತೆ ಬೇಕು ಅಂಥಾ ಯಾರು ಕೇಳಿದ್ರು ? ನಾಲ್ಕು ಪಥನೇ ಸಾಕಾಗಿತ್ತು. ಹತ್ತು ಪಥದ ರಸ್ತೆ ಮಾಡಿದ್ದೀರಾ ಆದರೆ ಬಡವರು ಓಡಾಡುವ ಸರ್ವಿಸ್ ರಸ್ತೆ ಎಲ್ಲಿದೆ ? ಅಪಘಾತವಾದರೆ ಚಿಕಿತ್ಸೆ ನೀಡಲು ಟ್ರಾಮಾ ಸೆಂಟರ್ ಎಲ್ಲಿದೆ ಎಂದು ಪ್ರಶ್ನಿಸಿದರು.

ಹೆಚ್ಚು ಓದಿದ ಸ್ಟೋರಿಗಳು

ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ..!

ಎರಡು ತಿಂಗಳ ನಿರಂತರ ಹೋರಾಟ..! VISL ಉಳಿಸಿ ಎಂದು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ಕಾರ್ಮಿಕರು..!

PRATAP SIMHA | ರಾಜಕೀಯ ಲಾಭಕ್ಕಾಗಿ ಮೀಸಲಾತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಗೆ ದಲಿತರ ಮೇಲೆ ನೈಜ ಕಾಳಜಿ ಇಲ್ಲ

ಬೆಂಗಳೂರು ಮೈಸೂರು ಟೋಲ್ ಸಂಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ ಎಚ್‌.ವಿಶ್ವನಾಥ್, ಸಂಸದ ಪ್ರತಾಪ ಸಿಂಹ ಮಿನಿ ಕಂಟ್ರ್ಯಾಕ್ಟರ್. ನಿನ್ನ ಕೆಲಸ ಏನು? ಹೆದ್ದಾರಿ ವಿಚಾರದಲ್ಲಿ ನೀನು ಮಾಡಿದ್ದೇನು ? ರಸ್ತೆಗೆ ಮೆಟಿರೀಯಲ್ ಸಪ್ಲೈ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ದಿನ ಬೆಳಗಾದರೆ ಹೈವೇ ಫೇಸ್ ಬುಕ್ ಲೈವ್ ಚೆಲುವಾಂಬ ಆಸ್ಪತ್ರೆಯಲ್ಲಿ ಬಾಣಂತಿ ಮಕ್ಕಳು ಸಾಯುತ್ತಿದ್ದಾರೆ. ಅವರನ್ನ ನೋಡಪ್ಪ, ಅಲ್ಲಿಯೂ ಪ್ರೆಸ್ ಮೀಟ್ ಮಾಡಪ್ಪ. ಅವನು ಯಾರೋ ಶ್ರೀಧರ್ ಅನ್ನೋ ಅಧಿಕಾರಿ ಸರ್ವಿಸ್ ರಸ್ತೆ ಮಾಡುವ ಕಾನೂನು ಎಲ್ಲಿದೆ ಅಂತಾನೆ. ಏನಪ್ಪ ಮೋದಿ ನಿಮ್ಮ ಸರ್ಕಾರದಲ್ಲಿ ಅಧಿಕಾರಿ ಶಾಹಿ ಆಡಳಿತ ನಡೆತಾ ಇದೆಯಾ ? ಎಂದು ಹರಿಹಾಯ್ದರು.

ಮೈಸೂರು ಕೊಡಗು ಸಂಸದರು ಎಲ್ಲವೂ ಸರಿಯಾಗಿದೆ. ಸುಮ್ಮನೆ ಜನ ಗಲಾಟೆ ಮಾಡ್ತಾರೆ. ಜೊತೆಗೆ ಪಂಥಾಹ್ವಾನ ಕೊಟ್ಟಿದ್ದಾರೆ ಬರಲಿ ಬೇಕಾದರೆ ಯಾವಾಗ ಅಂತ ಒಂದು ದಿನಾಂಕ ನಿಗದಿ ಮಾಡಿ ನಾವು ಬರಲು ಸಿದ್ದವಿದ್ದೇವೆ. ರಸ್ತೆ ಸಂಪೂರ್ಣ ಕಂಪ್ಲೀಟ್ ಆಗಿ ಪ್ರಯಾಣಿಕರಿಗೆ ಮೂಲಭೂತ ಸೌಕರ್ಯಗಳ ಕೊಟ್ಟ ಮೇಲೆ ಟೋಲ್ ದರ ನಿಗದಿಮಾಡಿ ಯಾರು ಬೇಡ ಅಂದ್ರು. ಈಗಾಗಲೇ ಕೆಎಸ್ಆರ್ಟಿಸಿ ಬಸ್ ದರ ಕೂಡ ಹೆಚ್ಚಿಸಿದ್ದಾರೆ. ನಮಗೆ ಗೊತ್ತಿಲ್ಲದೆ ನಮ್ಮ ಜೇಬು ಪಿಕ್ ಪ್ಯಾಕೆಟ್ ಆಗುತ್ತಿದೆ. 118 ಕಿ.ಮಿ ಸಂಪೂರ್ಣ ಮುಗಿದ ಮೇಲೆ ಸರ್ವಿಸ್ ರಸ್ತೆ ಕಾಮಗಾರಿಯು ಮುಗಿದ ಮೇಲೆ ಎಲ್ಲಾ ಸೇರಿ ಒಂದು ದರ ನಿಗದಿ ಮಾಡಿದರೆ ಸರಿ. ಅದನ್ನ ಬಿಟ್ಟು ಜನ ಸಾಮಾನ್ಯರ ಮೇಲೆ ಬರೆ ಎಳೆಯುವ ಕೆಲಸ ಮಾಡಬೇಡಿ ಎಂದು ಎಚ್ ವಿಶ್ವನಾಥ್ ಗುಡುಗಿದರು.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ಮೈಸೂರಿನಲ್ಲಿ ಜೆಡಿಎಸ್​ ಪಕ್ಷದ ಐತಿಹಾಸಿಕ ಪಂಚರತ್ನ ಸಮಾರೋಪ..! ವಿಶೇಷತೆ ಗೊತ್ತಾ..?
Top Story

ಮೈಸೂರಿನಲ್ಲಿ ಜೆಡಿಎಸ್​ ಪಕ್ಷದ ಐತಿಹಾಸಿಕ ಪಂಚರತ್ನ ಸಮಾರೋಪ..! ವಿಶೇಷತೆ ಗೊತ್ತಾ..?

by ಕೃಷ್ಣ ಮಣಿ
March 26, 2023
ಸಿ.ಟಿ ರವಿಗೆ ಮತ್ತೆ ಅವಮಾನ.. ಸಿದ್ದರಾಮಯ್ಯ ವಿರುದ್ಧ ಸೇಡಿಗೆ ಬಿದ್ದ ಬಿಜೆಪಿ..!
Top Story

ಸಿ.ಟಿ ರವಿಗೆ ಮತ್ತೆ ಅವಮಾನ.. ಸಿದ್ದರಾಮಯ್ಯ ವಿರುದ್ಧ ಸೇಡಿಗೆ ಬಿದ್ದ ಬಿಜೆಪಿ..!

by ಕೃಷ್ಣ ಮಣಿ
March 25, 2023
ಬಿಜೆಪಿಗೆ ಕೊಳ್ಳೆ ಹೊಡೆಯಲು ಎಟಿಎಂ ಆಗಿದೆ ಬೆಂಗಳೂರು..! ;  ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ
Top Story

ಬಿಜೆಪಿಗೆ ಕೊಳ್ಳೆ ಹೊಡೆಯಲು ಎಟಿಎಂ ಆಗಿದೆ ಬೆಂಗಳೂರು..! ; ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

by ಪ್ರತಿಧ್ವನಿ
March 22, 2023
ASSEMBLY ELECTION-2023 | ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಯಾರ ಕೊರಳಿಗೆ ವಿಜಯಮಾಲೆ..! ಪಾರ್ಟ್-‌10
ಇದೀಗ

ASSEMBLY ELECTION-2023 | ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಯಾರ ಕೊರಳಿಗೆ ವಿಜಯಮಾಲೆ..! ಪಾರ್ಟ್-‌10

by ಪ್ರತಿಧ್ವನಿ
March 21, 2023
ಸಿದ್ದರಾಮಯ್ಯರನ್ನು ಸೇಫ್​ ಮಾಡಲು ಬಿಡುಗಡೆಯಾಗಿದೆ ಈ ಮೊದಲ ಪಟ್ಟಿ : ಎಐಸಿಸಿ ಪ್ಲಾನ್​ ಏನು ಗೊತ್ತೇ..?
Top Story

ಸಿದ್ದರಾಮಯ್ಯರನ್ನು ಸೇಫ್​ ಮಾಡಲು ಬಿಡುಗಡೆಯಾಗಿದೆ ಈ ಮೊದಲ ಪಟ್ಟಿ : ಎಐಸಿಸಿ ಪ್ಲಾನ್​ ಏನು ಗೊತ್ತೇ..?

by ಮಂಜುನಾಥ ಬಿ
March 25, 2023
Next Post
ʼಕಿತ್ತೋದ ಸಿಟಿ ರವಿʼ ಎಂದ ವೀರಶೈವರು: ಲಿಂಗಾಯತರ ಆಕ್ರೋಶಕ್ಕೆ ಬೆದರಿ ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸಿದ ಸಿಟಿ ರವಿ

ʼಕಿತ್ತೋದ ಸಿಟಿ ರವಿʼ ಎಂದ ವೀರಶೈವರು: ಲಿಂಗಾಯತರ ಆಕ್ರೋಶಕ್ಕೆ ಬೆದರಿ ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸಿದ ಸಿಟಿ ರವಿ

ಉರಿಗೌಡ-ನಂಜೇಗೌಡ ಸಿನೆಮಾ ಟೈಟಲ್‌ ರಿಜಿಸ್ಟರ್:‌ ಮುನಿರತ್ನ ನಡೆಗೆ ಹೆಚ್‌ಡಿಕೆ ಕಿಡಿ

ಉರಿಗೌಡ-ನಂಜೇಗೌಡ ಸಿನೆಮಾ ಟೈಟಲ್‌ ರಿಜಿಸ್ಟರ್:‌ ಮುನಿರತ್ನ ನಡೆಗೆ ಹೆಚ್‌ಡಿಕೆ ಕಿಡಿ

Uri Gowda, Nanje Gowda Will be Destroyed If They Make A Movie: ಉರಿಗೌಡ, ನಂಜೇಗೌಡ ಸಿನಿಮಾ ಮಾಡಿದರೆ ಸರ್ವನಾಶ ಆಗ್ತಾರೆ : ಸಚಿವ ಮುನಿರತ್ನ ವಿರುದ್ಧ ಹೆಚ್.ಡಿಕೆ ಆಕ್ರೋಶ

Uri Gowda, Nanje Gowda Will be Destroyed If They Make A Movie: ಉರಿಗೌಡ, ನಂಜೇಗೌಡ ಸಿನಿಮಾ ಮಾಡಿದರೆ ಸರ್ವನಾಶ ಆಗ್ತಾರೆ : ಸಚಿವ ಮುನಿರತ್ನ ವಿರುದ್ಧ ಹೆಚ್.ಡಿಕೆ ಆಕ್ರೋಶ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist