ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಉಕ್ರೇನ್ ಸೇರಿದಂತೆ ಪ್ರಸಕ್ತ ವಿದ್ಯಾಮಾನಗಳ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಉಕ್ರೇನ್ ಗಡಿ ಭಾಗದಲ್ಲಿರುವ ಭಾರತೀಯರ ಸ್ಥಳಾಂತರ ಮೇಲ್ವಿಚರಣೆಗಾಗಿ ನಾಲ್ಕು ಹಿರಿಯ ಸಚಿವರನ್ನು ಕಳುಹಿಸಲು ಭಾರತ ಸರ್ಕಾರ ನಿನ್ನೆ ನಿರ್ಧರಿಸಿತ್ತು. ಉಕ್ರೇನ್ ಗಡಿ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಯುದ್ದ ಪೀಡಿತ ಪ್ರದೇಶಗಳಿಗೆ ಸಾಮಾಗ್ರಿಗಳನ್ನು ಭಾರತ ಘೋಷಿಸಿತ್ತು.
ಈ ಕುರಿತು ಸೋಮವಾರ ಸಚಿವ ಸಂಪುಟ ನಡೆಸಿದ ಮೋದಿ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರು ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ಜನರಿಗೆ ಭಾರತ ಸಹಾಯ ಮಾಡುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.