ಪ್ರಧಾನಿ ನರೇಂದ್ರ ಮೋದಿ ಆರಂಬಿಸಿದ್ದ ಪಿಎಂ-ಕೇರ್ಸ್ ಫಂಡ್ ಖರ್ಚು ವೆಚ್ಚದ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಹಾಗೂ ಪಿಎಂ-ಕೇರ್ಸ್ ಫಂಡ್ ಟ್ರಸ್ಟಿಗಳಿಗೆ ಬಾಂಬೆ ಹೈಕೋರ್ಟ್ ನಾಗಪುರ ಪೀಠವು ನೋಟೀಸ್ ಜಾರಿ ಮಾಡಿದೆ.
ಪಿಎಂ ಕೇರ್ಸ್ ಫಂಡ್ ಮೂಲಕ ಸಂಗ್ರಹಿಸಲಾದ ಮೊತ್ತವನ್ನು ಸರ್ಕಾರದ ವೆಬ್ಸೈಟ್ನಲ್ಲಿ ಪ್ರಕಟಗೊಳಿಸಿ ಸಾಮಾನ್ಯ ನಾಗರಿಕರಿಗೂ ಮಾಹಿತಿ ದೊರಕಿಸುವಂತೆ ಕೋರಿ ವಕೀಲ ಅರವಿಂದ ವಾಗ್ಮೊರೆ ಹಾಕಿದ್ದು ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ. ಅರವಿಂದ ವಾಗ್ಮೋರೆ ತನ್ನ ಅರ್ಜಿಯಲ್ಲಿ ಟ್ರಸ್ಟಿಗಳಿಂದ ನಾಮನಿರ್ದೇಶನಗೊಂಡ ಸ್ವತಂತ್ರ ಲೆಕ್ಕ ಪರಿಶೋಧಕರ ಬದಲು ಸಿಎಜಿ ಮೂಲಕ ಫಂಡ್ನ ಲೆಕ್ಕ ಪರಿಶೋಧಗೊಳಿಸಬೇಕೆಂದು ಕೋರಿಕೊಂಡಿದ್ದರು.
Also Read: ಕರೋನಾ ಕಾಲದಲ್ಲೂ ವರ್ಚಸ್ಸು ವೃದ್ಧಿಯ ಖಯಾಲಿಗೆ ‘ಪಿಎಂ ಕೇರ್ಸ್’?
ಕೇಂದ್ರ ಸರ್ಕಾರದ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್, ಈ ಕ್ರಮವನ್ನು ವಿರೋಧಿಸಿ ಅರ್ಜಿಯನ್ನು ವಜಾಗೊಳಿಸುವಂತೆ ವಾದ ಮಾಡಿದ್ದರು.
ಪಿಎಮ್-ಕೇರ್ಸ್ ವಿರುದ್ಧ ಹಾಕಿದ್ದ ಇಂತಹದ್ದೇ ಅರ್ಜಿಯನ್ನು ಕಳೆದ ಎಪ್ರಿಲ್ನಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದನ್ನು ನ್ಯಾ. ಎಸ್ ಬಿ ಶುಕ್ರೆ ಹಾಗೂ ಎ ಎಸ್ ಕಿಲೋರ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಗಮನಕ್ಕೆ ತಂದ ಅನಿಲ್ ಸಿಂಗ್, ಈ ಅರ್ಜಿಯನ್ನೂ ವಜಾಗೊಳಿಸುವಂತೆ ಕೋರಿಕೊಂಡಿದ್ದರು. ಈ ಕುರಿತು ಕೇಂದ್ರ ಸರ್ಕಾರದ ನಿಲುವೇನೆಂದು ಎರಡು ವಾರಗಳೊಳಗೆ ಅಫಿಡವಿಟ್ ಸಲ್ಲಿಸುವಂತೆ ಬಾಂಬೆ ಹೈಕೋರ್ಟ್ ಹೇಳಿದೆ.
Also Read: ಪ್ರಧಾನಿ ಮೋದಿಯ ಅಚ್ಚುಮೆಚ್ಚಿನ ‘ಕಾರ್ಪೊರೆಟ್ ಕುಳ’ಗಳು ‘ಪಿಎಂ ಕೇರ್ಸ್’ಗೆ ಕೊಟ್ಟಿದ್ದೆಷ್ಟು?
ಕೋಟ್ಯಾಂತರ ರುಪಾಯಿ ದೇಣಿಗೆ ಬರುವ ಈ ನಿಧಿಯ ಪಾರದರ್ಶಕತೆಯನ್ನು ಕಾಪಾಡಲು ಎರಡು ಪ್ರತಿಪಕ್ಷದ ನಾಯಕರನ್ನೂ ಸದಸ್ಯರನ್ನಾಗಿ ನೇಮಿಸಿಕೊಳ್ಳಬೇಕೆಂದು ಅರ್ಜಿದಾರ ಅರವಿಂದ ವಾಗ್ಮೋರೆ ಮನವಿ ಮಾಡಿದ್ದಾರೆ.
Also Read: “ಪಿಎಂ- ಕೇರ್ಸ್” ದೇಣಿಗೆ ಗೌಪ್ಯತೆ; ಪ್ರಧಾನಿ ನರೇಂದ್ರ ಮೋದಿಗೆ ನೈತಿಕ ಸೋಲು!
ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಪರಿಹಾರ ದೇಣಿಗೆ ಸಂಗ್ರಹಿಸಲು ಪಿಎಂ ಕೇರ್ಸ್ ಎಂಬ ಹೊಸ ನಿಧಿಯನ್ನು ಪ್ರಧಾನಿ ಪ್ರಾರಂಭಿಸಿದ್ದರು. ಈಗಾಗಲೇ ಇಂತಹದ್ದೇ PMNRF ನಿಧಿ ಜವಹರಲಾಲ್ ಪ್ರಧಾನಿಯಾಗಿದ್ದ ಕಾಲದಲ್ಲೇ ಪ್ರಾರಂಭಿಸಲಾಗಿತ್ತು. ಹಳೆಯ ನಿಧಿಯಲ್ಲಿ ಈಗಾಗಲೇ ದೇಣಿಗೆ ನೀಡಿದ್ದ ಹಣವಿದ್ದರೂ ಹೊಸದಾಗಿ ನಿಧಿ ಪ್ರಾರಂಬಿಸಿರುವ ಕುರಿತು ಅನುಮಾನಗಳನ್ನು ವ್ಯಕ್ತಪಡಿಸಿದ್ದವು. ಹೊಸದಾಗಿ ಪ್ರಾರಂಭಿಸಿದ್ದ ಪಿಎಂ ಕೇರ್ಸ್ ಪಾರದರ್ಶಕತೆ ಹೊಂದಿಲ್ಲ ಎಂದು ಸಾಕಷ್ಟು ವಿವಾದಗಳೆದ್ದಿತ್ತು.
Also Read: PM-CARES ಗೆ ಕರ್ನಾಟಕದ ನೆಟ್ಟಿಗರ ವಿರೋಧ..!