ದೇಶದ ಆರ್ಥಿಕತೆ ಕುಸಿಯುತ್ತಿದ್ದರೂ ಸಹ ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ ಉತ್ತರ ಪ್ರದೇಶದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳದ ಮಾಜಿ ಹಣಕಾಸು ಸಚಿವ ಅಮಿತ್ ಮಿತ್ರ ಮೋದಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಿತ್ರ ʻಪಿಎಂ ಯುಪಿ ಮೇಲೆ ತಮ್ಮ ಕಣ್ಣುಗಳನ್ನು ಹೆಚ್ಚು ಹಾಯಿಸುತ್ತಿದ್ದಾರೆ. ಆದರೆ, ದೇಶದ ಆರ್ಥಿಕತೆಯು ಏಕಕಾಲದಲ್ಲಿ ಹಣದುಬ್ಬರ, ನಿರುದ್ಯೋಗದಿಂದ ಕುಸಿತ ಕಾಣುತ್ತಿರುವುದು ಪ್ರಧಾನಿಯವರ ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
ಹಣದುಬ್ಬರವು ಶೇ.14.2% ರಷ್ಟಕ್ಕೆ ತಲುಪಿದೆ ಮತ್ತು ವಾರ್ಷಿಕ ಆಧಾರದ ಮೇಲೆ ನವೆಂಬರ್ 2021ಕ್ಕೆ ಶೇ.10.48% ಕ್ಕೆ ತಲುಪಿದೆ. ಬಡವರು ಮತ್ತು ಮಧ್ಯಮ ವರ್ಗದವರು ʻನಜ್ಜು ಗುಜ್ಜಾಗಿʼ ಹೋಗಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಐಷಾರಾಮಿ ಜೀವನದಲ್ಲಿ ಕಳೆದ್ಹೋಗಿದ್ದು, ಪವಿತ್ರ ಸ್ನಾನ ಮಾಡುವಲ್ಲಿ ನಿರತರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮಿತ್ರರವರು ಈ ಹಿಂದೆಯೂ ಸಹ ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಕಳವಳವನ್ನ ವ್ಯಕ್ತಪಡಿಸುತ್ತಾ, ಸೆಪ್ಟೆಂಬರ್ ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿದ್ದ ಮಿತ್ರ 36ಬಿಲಿಯನ್ ಜನರು ನಿರುದ್ಯೋಗಿಗಳಾಗಿದ್ದಾರೆ. ಆದಾಯವಿಲ್ಲ, ಜೀವನೋಪಾಯವಿಲ್ಲ ಮತ್ತು ಭರವಸೆಯಿಲ್ಲ. ಆದರೂ, ಪ್ರಧಾನಿ ಮೋದಿ ಸ್ಪಿನ್ ಡಾಕ್ಟರ್ಸ್ ಡ್ರಮ್ ಬಾರಿಸಿ ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಈ ಹಿಂದೆ ಟ್ವೀಟ್ ಮಾಡುವ ಮೂಲಕ ಜನರ ಗಮನ ಸೆಳೆದಿದ್ದರು.
ಅಪರೂಪಕ್ಕೊಮೆ ಟ್ವೀಟ್ ಮಾಡುವ ಮಿತ್ರ ನವೆಂಬರ್ ನಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಥಂಕರ್ ಮಾಡಿದ ಟ್ವೀಟ್ಅನ್ನು ʻಡಾ.ಜೆಕಿಲ್ ಮತ್ತು ಮಿಸ್ಟರ್ ಹೈಡ್ʼ ಅವರ ಶ್ರೇಷ್ಠ ಪ್ರಕರಣ ಎಂದು ಬಣ್ಣಿಸಿದ್ದನ್ನು ಇಲ್ಲಿ ಗಮನಿಸಬಹುದು.






