ರಷ್ಯಾ ಹಾಗೂ ಉಕ್ರೇನ್ ನಡುವೆ ಉದ್ಭವಿಸಿರುವ ಬಿಕ್ಕಟ್ಟಿನಿಂದಾಗಿ ಉಕ್ರೇನ್ನಿಂದ ಭಾರತಕ್ಕೆ ವಾಪಸ್ ಕರೆತರುತ್ತಿರುವ ಏರ್ ಇಂಡಿಯಾ ವಿಮಾನವು ಶನಿವಾರ ಸಂಜೆ 4 ಘಂಟೆಗೆ ಮುಂಬೈಗೆ ಬಂದಿಳಿಯಲಿದೆ. ಭಾರತೀಯ ಪ್ರಜೆಗಳನ್ನು ಬರಮಾಡಿಕೊಳ್ಳಲು ಕೇಂದ್ರ ಸಚಿವ ಪಿಯೂಷ್ ಗೋಯಲ್ ಛತ್ರಪತಿ ವಿಮಾನ ನಿಲ್ಧಾಣಕ್ಕೆ ಆಗಮಿಸಲಿದ್ದಾರೆ.
ರಸ್ತೆ ಮಾರ್ಗ ಮೂಲಕ ರೊಮೇನಿಯಾ ಗಡಿ ಪ್ರದೇಶವನ್ನು ತಲುಪಿದ ಭಾರತೀಯರನ್ನು ಏರ್ ಇಂಡಿಯಾ ವಿಶೇಷ ವಿಮಾನದ ಮೂಲಕ ಸ್ಥಳಾಂತರಿಸಲು ಬುಕಾರೆಸ್ಟ್ಗೆ ಮತ್ತು ಬುಡಾಪೆಸ್ಟ್ಗೆ ಕರೆದೊಯ್ಯುತ್ತಿದ್ದಾರೆ. ಉಕ್ರೇನಿಯಾದ ವಾಯು ಪ್ರದೇಶವನ್ನು ನಿರ್ಬಂಧಿಸುವ ಮೊದಲು ರಾಜಧಾನಿ ಕೈವ್ನಿಂದ ಏರ್ ಇಂಡಿಯಾ ಫೆಬ್ರವರಿ 22ರಂದು 240 ಭಾರತೀಯರನ್ನು ಕರೆತಂದಿತ್ತು.
ಫೆಬ್ರವರಿ 24 ಮತ್ತು 26ರಂದು ದೆಹಲಿಯಿಂದ ಎರಡು ವಿಶೇಷ ವಿಮಾನಗಳನ್ನು ಕಳುಹಿಸಲಾಗಿತ್ತು. ಆದರೆ, ರಷ್ಯಾದ ಆಕ್ರಮಣದ ನಂತರ ಉಕ್ರೇನಿಯನ್ ವಾಯು ಪ್ರದೇಶವನ್ನು ಮುಚ್ಚಲಾಗಿತ್ತು.
ಈ ಕುರಿತು ಮಾತನಾಡಿರುವ ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ರೊಮೇನಿಯಾ ಹಾಗೂ ಹಂಗೇರಿಯಿಂದ ಭಾರತೀಯರನ್ನು ಸ್ಥಳಾಂತರಿಸುವ ಕೆಲಸದಲ್ಲಿರುವುದಾಗಿ ಹೇಳಿದೆ.







