ಮಂಗಳೂರಿನ ಬೆಳ್ತಂಗಡಿ SIT ಠಾಣೆಯಲ್ಲಿ ಪ್ರಣಬ್ ಮೊಹಾಂತಿ (Pranab mohanthi) ಅಧಿಕಾರಿಗಳ ಸಭೆ ನಡೆಸಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ (Dharmasthala case) ಈವರೆಗೆ ನಡೆದ ತನಿಖೆಯ ಮಾಹಿತಿಯನ್ನು ಅಧಿಕಾರಿಗಳಿಂದ ಮೊಹಾಂತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಆರೋಪಿ ಸೇರಿದಂತೆ ಹಲವರ ಹೇಳಿಕೆಗಳನ್ನು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

ಸೌಜನ್ಯ ಮಾವ ವಿಠಲ ಗೌಡ ಹೇಳಿಕೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಬಂಗ್ಲೆಗುಡ್ಡ ಕಾಡಿನಲ್ಲಿ ರಾಶಿ ರಾಶಿ ಮಾನವನ ಕಳೇಬರವಿದೆ. ಸ್ಥಳ ಮಹಾಜರ ವೇಳೆ ಸಾಕಷ್ಟು ಅಸ್ಥಿಪಂಜರ ಕಾಣಸಿಕ್ಕಿದೆ ಎಂದು ವಿಠಲ್ ಗೌಡ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾನೆ. ಹೀಗಾಗಿ ಬುರುಡೆ ತಂದ ಜಾಗಕ್ಕೆ ವಿಠಲ್ ಗೌಡನನ್ನು ಕರೆದೊಯ್ದು SIT ಅಧಿಕಾರಿಗಳು ಮಹಜರ್ ನಡೆಸಿದ್ದರು.

ಎಸ್.ಐ.ಟಿ ವಿಚಾರಣೆ ವೇಳೆಯೂ ಈ ಬಗ್ಗೆ ವಿಠಲ ಗೌಡ ಹೇಳಿಕೆ ನೀಡಿದ್ದಾನೆ. ಹೀಗಾಗಿ ಬಂಗ್ಲೆಗುಡ್ಡ ಸಂಪೂರ್ಣ ಮಹಜರ್ ಗೆ SIT ಅಧಿಕಾರಿಗಳು ಪ್ಲಾನ್ ಮಾಡಿದ್ದಾರೆ. ಆ ಮೂಲಕ ಬಂಗ್ಲೆಗುಡ್ಡ ಬುರುಡೆ ರಹಸ್ಯ ಭೇದಿಸಲು SIT ಮುಂದಾಗಿದೆ. ಹೀಗಾಗಿ ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು, ಪಂಚಾಯತ್ ಕಾರ್ಯದರ್ಶಿ ಗಳನ್ನು ಸಿದ್ದರಾಗಿರುವಂತೆ SIT ಸೂಚನೆ ನೀಡಿದೆ ಎನ್ನಲಾಗಿದೆ.