ಪಾರಿವಾಳಗಳು ಹೆಚ್ಚಾಗಿ ಬಾಲ್ಕನಿಗಳಲ್ಲಿ,ಕೀಟಕಿಗಳ ಮೇಲೆ ಹಾಗೂ ಕಟ್ಟಡಗಳಲ್ಲಿ, ಹೆಚ್ಚಾಗಿ ಮೆಟ್ರೋ ಸ್ಟೇಷನ್ ನಲ್ಲಿ ಗೂಡುಗಳನ್ನು ಕಟ್ಟಿಕೊಂಡರುತ್ತವೆ. ಪಾರಿವಾಳಗಳು ಹೆಚ್ಚಿದ್ದರೆ ಅವುಗಳ ಸದ್ದು ಒಂದು ರೀತಿಯ ಕಿರಿಕಿರಿಯನ್ನ ಉಂಟುಮಾಡಿತ್ತದೆ.. ಅದರಲ್ಲೂ ಹೆಚ್ಚಾಗಿ ಹಿಕ್ಕೆಗಳನ್ನ ಹಾಕಿ ಪಾಲ್ಕನಿಗಳನ್ನು ಕಿಟಕಿಗಳನ್ನು ಗಲೀಜು ಮಾಡುತ್ತವೆ. ಹಾಗೂ ಎಲ್ಲಿ ನೋಡಿದರೂ ಅವುಗಳ ಪುಟ್ಟ ರೆಕ್ಕೆಗಳು ಬಿದ್ದಿರುತ್ತವೆ. ನೀವು ಎಷ್ಟೇ ಪ್ರಯತ್ನ ಮಾಡಿ ಓಡಿಸಿದರು ಮತ್ತೆ ಮತ್ತೆ ಅವು ಆ ಸ್ಥಳಗಳಿಗೆ ಬಂದು ಗೂಡುಗಳನ್ನ ಕಟ್ಟಿಕೊಳ್ಳುತ್ತವೆ. ಪಾರಿವಾಳದ ಹಿಕ್ಕಿಂದ ಮನುಷ್ಯನ ಶ್ವಾಸಕೋಶಕ್ಕೂ ತೊಂದರೆ ಇಷ್ಟು ಮಾತ್ರವಲ್ಲದೆ ಕೆಲವು ಆರೋಗ್ಯ ಸಮಸ್ಯೆಯು ಎದುರಾಗುತ್ತದೆ. ಹೇಗಾದ್ರು ಮಾಡಿ ಈ ಪಾರಿವಾಳಗಳನ್ನ ಇಲ್ಲಿಂದ ಖಾಲಿ ಮಾಡಿಸಬೇಕು ಅನ್ನೋ ಯೋಚನೆ ನಿಮಗಿದ್ದರೆ ನಿಮ್ಮ ಬಾಲ್ಕನಿಯಲ್ಲಿ ತಪ್ಪದೇ ಈ ಗಿಡಗಳನ್ನು ಬೆಳೆಸಿ..

ಪುದೀನಾ
ಪುದೀನಾ ಗಿಡಗಳ ವಾಸನೆ ಪಾರಿವಾಳಗಳಿಗೆ ಇಷ್ಟ ಆಗುವುದಿಲ್ಲ ಆದ್ದರಿಂದ ಗಿಡಗಳನ್ನು ಬಾಲ್ಕಾನಿಯಲ್ಲಿ ಪುದೀನಾ ನೆಡುವುದರಿಂದ ಪಾರಿವಾಳಗಳು ದೂರವಾಗುತ್ತವೆ ಅಥವಾ ಕಿಟಕಿ ಪ್ರದೇಶಗಳಲ್ಲಿ ಒಂದು ಪಾಟ್ನಲ್ಲಿ ಪುದೀನಾ ಬೆಳೆದು ಅಲ್ಲಿ ಇಡುವುದರಿಂದ ಪಾರಿವಾಳದ ಸಂಖ್ಯೆ ಕಡಿಮೆಯಾಗುತ್ತದೆ.

ಸಿಟ್ರೋನೆಲ್ಲ
ಈ ಗಿಡವನ್ನು ನಿಮ್ಮ ಬಾಲ್ಕನಿಯಲ್ಲಿ ನಡೆಯುವುದರಿಂದ ಪಾರಿವಾಳಗಳು ಬರುವುದಿಲ್ಲ ಇದರ ಪರಿಮಳ ಪಾರಿವಾಳಕ್ಕೆ ಆಗುವುದಿಲ್ಲ, ಮಾತ್ರವಲ್ಲದೇ ಇದು ಸೊಳ್ಳೆಗಳನ್ನ ಹಾಗೂ ಕ್ರಿಮಿ ಕೀಟಗಳನ್ನು ತಡೆದು ಹಾಕುತ್ತದೆ.

ಈರುಳ್ಳಿ ಅಥವಾ ಬೆಳ್ಳುಳ್ಳಿ ಗಿಡ
ಬಾಲ್ಕನಿಯಲ್ಲಿ ಈರುಳ್ಳಿ ಅಥವಾ ಬೆಳ್ಳುಳ್ಳಿ ಗಿಡವನ್ನು ಬೆಳೆಸುವುದರಿಂದ ಪಾರಿವಾಳಗಳು ದೂರವಾಗುತ್ತವೆ.ಕಾರಣ ಐದರಲ್ಲಿ ಆಲಿಸಿನ್ ಎಂಬ ಅಂಶವಿದ್ದು..ಪಾರಿವಾಳಗಳು ಇಷ್ಟಪಡುವುದಿಲ್ಲ.

ಚಂಡು ಹೂವಿನ ಗಿಡ
ಇವುಗಳನ್ನು ಹೆಚ್ಚಾಗಿ ನಾವು ಹಳ್ಳಿಗಳಲ್ಲಿ ಮನೆ ಸುತ್ತಮುತ್ತ ಬೆಳೆದಿರುವುದನ್ನ ನೋಡ್ತಿವಿ. ಈ ಗಿಡಗಳನ್ನು ನಿಮ್ಮ ಮನೆಯ ಅಕ್ಕ-ಪಕ್ಕ ಬೆಳೆಸುವುದರಿಂದ ಪಾರಿವಾಳದ ಕಾಟ ಕಡಿಮೆಯಾಗುತ್ತದೆ ಬರುವುದಿಲ್ಲ ಹಾಗೂ ಸೊಳ್ಳೆಗಳು ಕೂಡ ಬರುವುದಿಲ್ಲ. ಮತ್ತು ಮುಖ್ಯವಾಗಿ ಈ ಹೂವನ್ನು ಬಾಗಿಲ ಅಲಂಕಾರಕ್ಕೆ ಬಳಸಬಹುದು.
