
ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಕೊಡಬೇಕು ಅಂತ ರಾಜ್ಯ ಸರ್ಕಾರ ಒಂದು ಕಾನೂನು ಜಾರಿಗೆ ಮುಂದಾಗಿತ್ತು. ಕೆಲವು ಉದ್ಯಮಿಗಳು ಸರ್ಕಾರದ ನಿಲುವನ್ನು ವಿರೋಧಿಸಿದ್ರು. ತಾತ್ಕಾಲಿಕವಾಗಿ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿದಿದೆ. ಆದರೆ ಕನ್ನಡ ಪತ ಒಕ್ಕೂಟಗಳು, ಕನ್ನಡ ಪರವಾಗಿರುವ ಜನರು, ಉದ್ಯಮಗಳು, ರಾಜಕಾರಣಿಗಳು ಎಲ್ಲರೂ ಉದ್ಯೋಗದಲ್ಲಿ ಕನ್ನಡಿಗರಿಗೆ ಇಂತಿಷ್ಟು ಮೀಸಲಾತಿ ತಪ್ಪಲ್ಲ ಎನ್ನುವ ವಾದ ಮಂಡಿಸುತಿದ್ದಾರೆ. ಈ ನಡುವೆ ಕಾನೂನು ತಜ್ಞರು ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ಆಗದಂತೆ ಕಾಯ್ದೆ ಜಾರಿಯಾದರೆ ತಪ್ಪಿಲ್ಲ ಎನ್ನುತ್ತಿದ್ದಾರೆ.

ಈ ನಡುವೆ ಫೋನ್ ಪೇ Founder & CEO Sameer.Nigam ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು ಕನ್ನಡಿಗರನ್ನು ಕೆರಳುವಂತೆ ಮಾಡಿದೆ. ನನಗೆ 46 ವರ್ಷ, ಯಾವುದೇ ರಾಜ್ಯದಲ್ಲಿ 15 ವರ್ಷಕ್ಕಿಂತ ಹೆಚ್ಚಿನ ವರ್ಷ ವಾಸ ಮಾಡಿಲ್ಲ. ನನ್ನ ತಂದೆ ಭಾರತೀಯ ನೌಕಪಡೆಯಲ್ಲಿದ್ರು. ಅವರ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗ ಪಡೆಯಲು ಅರ್ಹರಲ್ಲವೇ..? ನಾಚಿಕೆಗೇಡು ಎಂದು ಟ್ವೀಟ್ ಮಾಡಿದ್ದು ಕನ್ನಡಿಗರ ಕಣ್ಣು ಕೆಂಪಾಗುವಂತೆ ಮಾಡಿದೆ.

ನಿನಗೆ ಕೆಲಸ ಮಾಡಲು ಅರ್ಹತೆಯಿಲ್ಲ ಎಂದು ಯಾರು ಹೇಳಿದ್ರು..? ಆದರೆ ಕರ್ನಾಟಕದಲ್ಲಿ ಕೆಲಸ ಮಾಡುವುದಾದರೆ ಕನ್ನಡ ಭಾಷೆ ಕಲಿಯುವುದು ಸೂಕ್ತ ಎನ್ನುವ ಪೋಸ್ಟ್‌ಗೆ ಮತ್ತೊಮ್ಮೆ ಖಾರವಾಗಿ ಪ್ರತಿಕ್ರಿಯಿಸಿರುವ ಸಮೀರ್ ನಿಗಮ್, ಕರ್ನಾಟಕ ಇರುವುದು ಕೇವಲ ಕನ್ನಡ ಭಾಷಿಕರಿಗಾ..? ಎಂದು ಪ್ರಶ್ನಿಸುವ ಜೊತೆಗೆ ಭಾರತದಲ್ಲಿ ಎಲ್ಲಿ ಬೇಕೋ ಅಲ್ಲಿ ನಾನು ಕೆಲಸ ಮಾಡುತ್ತೇನೆ. ನನಗೆ ಬೇಕಾದ ಭಾಷೆ ಕಲಿಯುತ್ತೇನೆ. ಭಾರತ ಸಂವಿಧಾನ ನನಗೆ ಈ ಹಕ್ಕನ್ನು ಕೊಟ್ಟಿದೆ. ಇದು ನನ್ನ ಆಯ್ಕೆ ಎಂದು ಧಿಮಾಕು ಪ್ರದರ್ಶನ ಮಾಡಿರುವುದು ಕನ್ನಡಿಗರ ಕಿಚ್ಚು ಹೆಚ್ಚಾಗುವಂತೆ ಮಾಡಿದೆ.

ಕನ್ನಡಿಗರು ಎನಿಸಿಕೊಂಡ ಪ್ರತಿಯೊಬ್ಬರು ಸಮೀರ್ ನಿಗಮ್‌ಗೆ ಪ್ರತಿಕ್ರಿಯೆ ಕೊಡುತ್ತಿದ್ದು, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಹಿಂದಿಯವನ ಮಾಲೀಕತ್ವದ Phone pay ಅನ್ ಇನ್‌ಸ್ಟಾಲ್ ಮಾಡ್ತಿದ್ದೀವಿ ಎಂದು ಪ್ರತಿಕ್ರಿಯೆ ಕೊಡುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ, ಕಾಂಗ್ರೆಸ್‌ನ ಲಾವಣ್ಯ ಬಲ್ಲಾಳ್ ಜೈನ್ ಸೇರಿದಂತೆ ಸಾಕಷ್ಟು ಜನರು ಫೋನ್ ಪೇ ಮಾಲೀಕರ ವಾದ ಖಂಡಿಸಿದ್ದಾರೆ. ಜೊತೆಗೆ ಫೋನ್ ಪೇ Uninstall ಮಾಡಿದ್ದಾರೆ. ನೀವೂ ಕೂಡ ಕನ್ನಡಿಗರಲ್ಲವೇ..? ಕನ್ನಡಿಗರ ಮಕ್ಕಳಿಗೆ ಉದ್ಯೋಗ ಮೀಸಲಾತಿ ಕೊಟ್ಟರೆ ತಪ್ಪೇನು..? ಕರ್ನಾಟಕದ ನೆಲ, ಜಲ ಬಳಸಿಕೊಂಡು ಹಿಂದಿವಾಲಾಗಳ ಗುಲಾಮರಾಗಿ ಕೆಲಸ ಮಾಡಬೇಕೇ..? ಇಲ್ಲ ಎನ್ನುವುದಾರೆ ನೀವು ಕೂಡ ಫೋನ್ ಪೇ ಅನ್‌ಇನ್‌ಸ್ಟಾಲ್ ಮಾಡಿ. ಕನ್ನಡಿಗರ ತಾಕತ್ತು ಆತನಿಗೂ ಸ್ವಲ್ಪ ತಿಳಿಯಲಿ ಅಲ್ಲವೇ..?