ಪಾಪ್ಯೂಲರ್ ಫ್ರಂಟ್ ಆಪ್ ಇಂಡಿಯಾ(PFI) ಸಂಘಟನೆಯನ್ನು ಕೇಂದ್ರ ಸರ್ಕಾರವು 5 ವರ್ಷಗಳ ಕಾಲ ನಿಷೇಧಿಸಿದ ಬೆನ್ನಲ್ಲೇ ಸಂಘಟನೆಯ ಸಾಮಾಜಿಕ ಜಾಲತಾಣ ಖಾತೆಗಳನ್ನು ಸಹ ಅಳಿಸಲಾಗಿದೆ.
PFI ಸಂಘಟನೆಗೆ ಟ್ವಿಟರ್ನಲ್ಲಿ ಒಟ್ಟು 81 ಸಾವಿರ ಮಂದಿ ಹಿಂಬಾಲಕರು ಇದ್ದರು ಎಂದು ತಿಳಿದು ಬಂದಿದೆ.

PFI ಸಂಘಟನೆಯನ್ನು ಕೇಂದ್ರ ಸರ್ಕಾರವು ಬುಧವಾರ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿ ನಿಷೇಧಿಸಿತ್ತು.
ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ನಂಟು ಹಾಗೂ ದೇಶದೊಳಗೆ ಕೋಮು ದ್ವೇಷವನ್ನ ಹರಡುವ ಮೂಲಕ ಶಾಂತಿ ಸೌಹಾರ್ದತೆಗೆ ಧಕ್ಕೆ ತರಲು ಸಂಘಟನೆ ಯತ್ನಿಸಿದೆ ಎಂದು ಆರೋಪಿಸಲಾಗಿದೆ.