ಧರ್ಮಸ್ಥಳ (Dharmasthala) ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಅಶ್ವತ ನಾರಾಯಣ (Ashwath narayan) ಮಾತನಾಡಿದ್ದು, ಧರ್ಮಸ್ಥಳದ ಅಸಹಜ ಸಾವು ಪ್ರಕರಣದ ಬಗ್ಗೆ ಸದನದಲ್ಲಿ ಉತ್ತರ ಕೊಡುವ ವಿಚಾರವಾಗಿ ಇವತ್ತು ಸರ್ಕಾರ ಉತ್ತರ ಕೊಡಲಿದೆ. ಈ ಬಗ್ಗೆ ಗೃಹ ಸಚಿವರು, ಸಿಎಂ, ಡಿಸಿಎಂ ಸದನದಲ್ಲಿ ಉತ್ತರ ಕೊಡಬೇಕಿದೆ..ಧರ್ಮಸ್ಥಳ ಪ್ರಕರಣದಲ್ಲಿ ಬಹಳ ಸ್ಪಷ್ಟವಾಗಿ ಉತ್ತರ ಕೊಡಲಿ ಎಂದು ಆಗ್ರಹಿಸಿದ್ದಾರೆ.

ಈ ದೂರುದಾರ ಅನಾಮಿಕ ವ್ಯಕ್ತಿಯ ಬಗ್ಗೆಯು ತನಿಖೆ ಆಗಲಿ. ಇನ್ನು ಕೆಲವರಿ ಸೋಷಿಯಲ್ ಮೀಡಿಯಾದಲ್ಲಿ ಆರೋಪಗಳನ್ನು ಮಾಡ್ತಿದ್ದಾರೆ. ಹೀಗಾಗಿ ಅವರ ಮೇಲೆ ಸುಮೊಟು ಕೇಸ್ ಹಾಕಬೇಕು. ಹಿಂದು ಕಾರ್ಯಕರ್ತರ ಮೆಲೆ ಕಾರಣ ಇಲ್ಲದೆ ಸುಮೋಟು ಕೇಸ್ ಹಾಕ್ತಾರೆ..? ಧರ್ಮಸ್ಥಳದಲ್ಲಿ ಅಪಪ್ರಚಾರ ಮಾಡ್ತಿರುವವರ ಮೇಲೆ ಕೇಸ್ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಡಿಸಿಎಂ ಷಡ್ಯಂತ್ರ ಅಂತಾರೆ..ಆದ್ರೆ ಏನ್ ಆಗಿದೆ ಎಂದು ಹೇಳಬೇಕಲ್ಲಾ..? ಗಾಳಿಯಲ್ಲಿ ತೇಲಿಸುವ ಕೆಲಸ ಆಗಬಾರದು. ಈ ಬಗ್ಗೆ ತನಿಖೆ ಆಗ್ತಿದೆ, ಷಡ್ಯಂತ್ರದ ಬಗ್ಗೆ ಸಂಪೂರ್ಣವಾಗಿ ತಿಳಿಸಲಿ. ಈ ಕಿಡಿಗೇಡಿಗಳು ಸುಪ್ರೀಂ ಕೋರ್ಟ್ ಗೆ ಲಾಯರ್ ಗಳನ್ನ ಇಟ್ಟುಕೊಂಡಿದ್ದಾರೆ, ಇಷ್ಟ ಬಂದಾಗೆ ಕಥೆಯನ್ನ ಸೃಷ್ಟಿ ಮಾಡ್ತಿದ್ದಾರೆ. ಸುಳ್ಳನ್ನೆ ಸತ್ಯವನ್ನಾಗಿ ಮಾಡಲು ಹೊರಟಿದ್ದಾರೆ.ಇದನ್ನ ಪಿ ಎಫ್ ಐ & ಎಸ್.ಡಿ.ಪಿ.ಐ ಮಾಡ್ತಿದೆ ಎಂದು ಆರೋಪಿಸಿದ್ದಾರೆ.