ಮದುವೆ ಸಮಾರಂಭಗಳು ಅಥವಾ ಇತರೆ ಫಂಕ್ಷನ್ ಗಳು ಬಂದ್ರೆ ಪ್ರತಿಯೊಬ್ಬರೂ ಕೂಡ ಯತ್ನಿಕ ವೇರನ್ನ ಧರಿಸಿ ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ. ಹೆಣ್ಣು ಮಕ್ಕಳಿಗಂತನೇ ವಿಧವಿಧವಾದ ಸೀರೆಗಳು, ಲೆಹೆಂಗಾ ,ಚೂಡಿದಾರ್ ,ಕ್ರಾಪ್ ಟಾಪ್ ಮತ್ತು ಸ್ಕರ್ಟ್ ,ಹಾಫ್ ಸಾರಿ, ಗಾಗ್ರಾ ಚೋಲಿ ಅಬ್ಬಬ್ಬಾ ಒಂದಲ್ಲ ಎರಡಲ್ಲ ವೆರೈಟಿಸ್ ಇದ್ದು, ಈ ಬಟ್ಟೆಗಳನ್ನು ಧರಿಸಿ ಹೆಣ್ಣು ಮಕ್ಕಳ ಸೌಂದರ್ಯ ನೋಡುಗರ ಕಣ್ಣು ಕುಕ್ಕುವಂತೆ ಮಾಡುತ್ತದೆ.
ಇನ್ನು ಗಂಡೈಕ್ಳು ನಾವೇನು ಕಮ್ಮಿ ಇಲ್ಲ ಅನ್ನುವಂತ ಹೆಣ್ಣು ಮಕ್ಕಳಿಗೆ ಕಾಂಪಿಟೇಶನ್ ನೀಡುವ ರೀತಿ ಯತ್ನಿಕ್ ಕಲೆಕ್ಷನ್ ಗಳನ್ನು ಧರಿಸುತ್ತಾರೆ . ಪಂಚೆ – ಶರ್ಟ್ ಶಲ್ಯ ,ದೋತಿ, ಜುಬ್ಬಾ ಪೈಜಾಮ್ ಇವುಗಳನ್ನ ಧರಿಸಿ ಹಾಂಡ್ಸಮ್ ಆಗಿ ಕಾಣಿಸ್ತಾರೆ..
ಗಂಡು ಮಕ್ಕಳು, ಹೆಣ್ಣು ಮಕ್ಕಳು ,ಪುಟಾಣಿಗಳು, ಅಪ್ಪ-ಅಮ್ಮಂದಿರು ,ಅಜ್ಜಿ ತಾತಂದಿರೋ ,ಇವರೆಲ್ಲ ಸಮಾರಂಭಗಳಲ್ಲಿ ಎಥ್ನಿಕ್ ಬಟ್ಟೆ ಧರಿಸಿ ಖುಷಿಪಡುವುದು ಮಿಂಚುವುದು ಒಂದೆಡೆಯಾದ್ರೆ, ಇದೀಗ ಶಾಕ್ ನೀಡುವ ವಿಚಾರ ಮತ್ತೊಂದಿದೆ ಅದು ಏನಪ್ಪ ಅಂದ್ರೆ ಫಂಕ್ಷನ್ ಗಳಲ್ಲಿ ಮುದ್ದಾಗಿ ಗ್ರಾಂಡ್ ಆಗಿ ಕಾಣಲು ಸ್ಟೈಲಿಶ್ ಶ್ವಾನಗಳಿಗೂ ಯತ್ನಿಕ ಕಲೆಕ್ಷನ್ ಗಳು ಸದ್ಯ ಮಾರ್ಕೆಟ್ ನಲ್ಲಿ ಲಭ್ಯವಿದೆ.
ಹೌದು ಹೆಚ್ಚು ಜನರ ಮನೆಯಲ್ಲಿ ಶ್ವಾನಗಳನ್ನು ಸಾಕುತ್ತಾರೆ.. ಅಬ್ಬಬ್ಬ ಸಾಕುವುದು ಮಾತ್ರವಲ್ಲ ತಮ್ಮ ಮನೆಯ ಮಕ್ಕಳಂತೆ ಅವುಗನ್ನು ನೋಡಿಕೊಳ್ತಾರೆ.ಶ್ವಾನಕ್ಕೆ ಅಂತಾನೆ ವಿಷೇಶವಾದ ಅಡುಗೆಗಳನ್ನು ತಯಾರಿಸುವುದರ ಜೊತೆಗೆ ಮಕ್ಕಳ್ಳಿಗೆ ತಿನ್ನಿಸಿದಂತೆ ತಿನ್ನಿಸುತ್ತಾರೆ..ಸರಿಯಾದ ಸಮಯಕ್ಕೆ ಊಟ ಸ್ನಾನ ಎಲ್ಲವು ಕೂಡಾ ಮನುಷ್ಯಂತೆಯೆ ಮಾಡುತ್ತಾರೆ..
ಇಷ್ಟು ಮಾತ್ರವಲ್ಲದೆ ತಿಂಗಳಿಗೊಮ್ಮೆ ಸ್ಪಾ, ಹೇರ್ ಕಟ್ಟ ,ನೈಲ್ ಟ್ರಿಮ್ ಅಬ್ಬಬ್ಬ ಒಂದಾ ಎರಡ.ಇದೆಲ್ಲದರ ಜೊತೆಗೆ ಶ್ವಾನಗಳಿಗಂತನೆ ವಿವಿಧವಾದ ಬಟ್ಟೆ, ಆಸ್ಕಸೆರಿಸ್ ಕೂಡಾ ಮಾರ್ಕೆಟ್‌ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿವೆ.. ಇದೀಗ ಹುಬ್ಬೆರಿರುವಂತೆ ಮಾಡಿದ್ದು ಶ್ವಾನಗಳಿಗೆ ಫಂಕ್ಷನ್ಗೆ ಅಂತಾನ ವಿಭಿನ್ನವಾದ ಗ್ರಾಂಡ್ ಲುಕ್ ನೀಡುವ ಎಥ್ನಿಕ್ ಬಟ್ಟೆಗಳದ್ದು.
ಹೌದು ಶ್ವಾನಗಳಿಗೋಸ್ಕರ ಸ್ಲೀಕ್, ಕಾಟನ್ ,ವೆಲ್ವೆಟ್ ಫ್ಯಾಬ್ರಿಕ್ ಇವುಗಳಲ್ಲಿ ವೆರೈಟಿಸ್ ಆಫ್ ಡ್ರೆಸ್ ಗಳನ್ನು ರೆಡಿ ಮಾಡಿದ್ದಾರೆ ಅದರಲ್ಲೂ ಹೆಣ್ಣು ಶ್ವಾನಗಳಿಗೆ ಫ್ರಾಕ್, ಕ್ರಾಪ್ ಟಾಪ್ ಮಿನಿ ಸ್ಕರ್ಟ್, ಯತ್ನಿಕ್ ಆಕ್ಸೆಸರೀಸ್ ಗಳು ಹೆಣ್ಣು ಶ್ವಾನಗಳಿಗೋಸ್ಕರನೇ ರೆಡಿ ಮಾಡಿದ್ದಾರೆ.
ಗಂಡು ನಾಯಿಮರಿಗಳಿಗೆ ಕೋಟ್, ವೆಸ್ಟ್ ಕೋಟ್, ಪಂಜೆ ಮತ್ತು ಶರ್ಟ್ ಹೀಗೆ ಪ್ರತಿಯೊಂದು ಕೂಡ ಪೆಟ್ ಶಾಪ್ಗಳಲ್ಲಿ ಲಭ್ಯವಿದೆ.ಅದು ಮದುವೆ ಸಮಾರಂಭಗಳಿಗೆ ಒಂದು ರೀತಿಯ ಎಥ್ನಿಕ್ ವೆರ್ಗಳು ಸಿಕ್ಕಿದರೆ, ನಾಯಿಮರಿಗಳ ಬರ್ತಡೇ ಸೆಲೆಬ್ರೇಶನ್ ಗೆ ಟ್ರೆಂಡಿ ಕಲೆಕ್ಷನ್ ಮಾರ್ಕೆಟ್ ನಲ್ಲಿದೇ.
ಆದ್ರೆ ಕೆಲವು ಬಾರಿ ಪುಟಾಣಿ ಶ್ವಾನ ಗಳಿಗೆ ಈ ಹೆವಿ ಬಟ್ಟೆಗಳನ್ನ ಧರಿಸುವುದರಿಂದ ಕಿರಿಕಿರಿಯಾಗಬಹುದು ಹಾಗೂ ಅಲರ್ಜಿ ಕೂಡ ಆಗುತ್ತದೆ.