ನವೆಂಬರ್ 1, 2021ರಂದು ದೇಶದಲ್ಲಿ ಸತತ ಆರನೇ ದಿನವು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದ್ದು ಸಾರ್ವತ್ರಿಕ ಗರಿಷ್ಠ ಮಟ್ಟವನ್ನ ತಲುಪಿವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 35ಪೈಸೆ ಹೆಚ್ಚಳವಾಗಿದ್ದು ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 109 ರೂ ಆಗಿದ್ದು ಡೀಸೆಲ್ 98.42ರೂಪಾಯಿಗೆ ಮಾರಾಟವಾಗುತ್ತಿದೆ.
ಮಹಾರಾಷ್ಟ್ರದ ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 106 ರೂಪಾಯಿ ಆಗಿದೆ ಎಂದು ಆಯಿಲ್ ಕಾರ್ಪೋರೆಷನ್ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.
ಬೆಂಗಳೂರಿನಲ್ಲಿ ಪ್ರ ತಿ ಲೀಟರ್ ಪೆಟ್ರೋ ಲ್ಗೆ ₹113.56 ಮತ್ತು ಡೀಸೆಲ್ಗೆ ₹104.50 ಇದೆ; ಹೈದರಾಬಾದ್ನಲ್ಲಿ ಪೆಟ್ರೋ ಲ್ ₹114.12 ಮತ್ತು ಡೀಸೆಲ್ ದರ ₹107.40 ಆಗಿದೆ. ದೆಹಲಿಯಲ್ಲಿ ಪೆಟ್ರೋ ಲ್ ದರ ₹109.69 ಮತ್ತು ಡೀಸೆಲ್ಗೆ ₹98.42 ಇದೆ. ಮುಂಬೈನಲ್ಲಿ ಪೆಟ್ರೋ ಲ್ ₹115.50 ಮತ್ತು ಡೀಸೆಲ್ ₹106.62ಕ್ಕೆ ಮಾರಾಟವಾಗುತ್ತಿದೆ. ಕೋಲ್ಕ ತ್ತ ಮತ್ತು ಚೆನ್ನೈ ನಲ್ಲಿ ಪೆಟ್ರೋ ಲ್ ದರ ಕ್ರಮವಾಗಿ ₹110.15 ಮತ್ತು ₹106.35, ಡೀಸೆಲ್ ದರ ಕ್ರಮವಾಗಿ ₹101.56 ಮತ್ತು ₹102.59 ನಿಗದಿಯಾಗಿದೆ.

ಸ್ಥಳೀಯ ತೆರಿಗೆ (ವ್ಯಾಟ್) ಮತ್ತು ಸರಕು ಸಾಗಣೆ ಶುಲ್ಕವನ್ನು ಅವಲಂಬಿಸಿ ದೇಶದಲ್ಲಿ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ಇದಲ್ಲದೆ, ಕೇಂದ್ರ ಸರ್ಕಾರವು ಇಂಧನಗಳ ಮೇಲೆ ಅಬಕಾರಿ ಸುಂಕವನ್ನು ವಿಧಿಸುತ್ತದೆ.