ಶಿಲ್ಲಾಂಗ್: ಮೇಘಾಲಯ ರಾಜ್ಯದ ಉಪಮುಖ್ಯಮಂತ್ರಿ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿರುವ ಘಟನೆ ನಡೆದಿದೆ.
ಪೂರ್ವ ಖಾಸಿ ಹಿಲ್ಸ್ನ ನೊಂಗ್ಮೆನ್ಸಾಂಗ್ ಪ್ರದೇಶದಲ್ಲಿನ ನಿವಾಸದ ಮೇಲೆಯೇ ಈ ದಾಳಿ ನಡೆದಿದೆ. ಉಪ ಮುಖ್ಯಮಂತ್ರಿ ಸ್ನಿಯಾವ್ಭಾಲಾಂಗ್ ಧರ್ (Sniawbhalang Dhar) ನಿವಾಸದ ಮೇಲೆ ದುಷ್ಕರ್ಮಿಗಳು ಬಾಂಬ್ ಎಸೆದಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಪ್ರಕರಣ ಕೂಡ ದಾಖಲಾಗಿದೆ. ಹೀಗಾಗಿ ಡಿಸಿಎಂ ನಿವಾಸ ಹಾಗೂ ಸುತ್ತಮತ್ತ ಭದ್ರತೆ ಹೆಚ್ಚಿಸಲಾಗಿದೆ. ಯಾವ ಕಾರಣಕ್ಕೆ ಈ ಘಟನೆ ನಡೆದಿದೆ ತಿಳಿದಿಲ್ಲ. ಇದರ ಹೊಣೆಯನ್ನು ಯಾರೂ ಕೂಡ ಹೊತ್ತಿಲ್ಲ.