ಬೆಳಗಾವಿಯ ವ್ಯಕ್ಸಿನ್ ಡಿಪೋ ಆವರಣದಲ್ಲಿ ಮಹಾರಾಷ್ಟ್ರ ಏಕೀಕರಣ್ ಸಮಿತಿ(MES) ನಡೆಸಲು ಉದ್ದೇಶಿಸಿದ ಮಹಾಮೇಳವ್ ಸಮಾವೇಶಕ್ಕೆ ಬೆಳಗಾವಿ ಪೊಲೀಸರಿ ಅನುಮತಿ ನಿರಾಕರಿಸಿದ್ದು ಎಂಇಎಸ್ ಮುಖಂಡರು ಸ್ಥಳದಿಂದ ಪೇರಿಕಿತ್ತಿದ್ದಾರೆ.
ವಿಧಾನಮಂಡಲ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತಿರುವ ಕಾರಣ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಹಾಮೇಳವ್ ನಡೆಯುವ ಪ್ರದೇಶದಲ್ಲಿ ಜಿಲ್ಲಾಡಳಿತ ನಿಷೇಧಾಜ್ಷೆ ಹೊರಡಿಸಿತ್ತು.
ಇನ್ನು ಮಹಾರಾಷ್ಟ್ರದಿಂದ ಬೆಳಗಾವಿ ನಗರಕ್ಕೆ ಆಗಮಿಸುತ್ತಿದ್ದ ವಿವಿಧ ಮರಾಠಿ ಸಂಘಟನೆಯ ಸದಸ್ಯರನ್ನು ಪೊಲೀಸರು ಇಲ್ಲಿನ ನಿಪ್ಪಾಣಿ ಬಳಿ ತಡೆದು ವಾಪಸ್ ಕಳುಹಿಸಿದ್ದಾರೆ. ಕೊಗ್ಗನಳ್ಳಿ ಚೆಕ್ಪೋಸ್ಟ್ ಬಳಿ ಕಾರ್ಯಕರ್ತರನ್ನು ತಡೆದ ಪೊಲೀಸರು ವಾಪಸ್ ಕಳುಹಿಸಿದ್ದಾರೆ ಮತ್ತು ಗಡಿಯಲಿ ಕಟ್ಟೆಚ್ಚರ ವಹಿಸಿದ್ದಾರೆ.