• Home
  • About Us
  • ಕರ್ನಾಟಕ
Thursday, January 29, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಭ್ರಷ್ಟ ಬಿಜೆಪಿಯನ್ನು ಜನ ಕಿತ್ತೊಗೆಯುತ್ತಾರೆ : ಕಾಂಗ್ರೆಸ್ ಸಂಸದ ಶಶಿ ತರೂರ್‌

Any Mind by Any Mind
April 9, 2023
in Top Story, ದೇಶ, ರಾಜಕೀಯ
0
ಭ್ರಷ್ಟ ಬಿಜೆಪಿಯನ್ನು ಜನ ಕಿತ್ತೊಗೆಯುತ್ತಾರೆ :  ಕಾಂಗ್ರೆಸ್ ಸಂಸದ ಶಶಿ ತರೂರ್‌
Share on WhatsAppShare on FacebookShare on Telegram


ಬೆಂಗಳೂರು : ಏ.೦೯: ರಾಜ್ಯದಲ್ಲಿ ಚುನಾವಣೆ ಕಾವು ಹೆಚ್ಚಾಗಿದ್ದು, ಕಾಂಗ್ರೆಸ್ ಪಕ್ಷದ ಆಚಾರ ವಿಚಾರಗಳ ಪ್ರಚಾರ ಮಾಡಲಾಗುತ್ತಿದೆ. ನಾನು ಮೊದಲ ಬಾರಿ ಮತ ಹಾಕುತ್ತಿರು ಯುವ ಮತದಾರರು ಹಾಗೂ ಶಿಕ್ಷಕರ ಜತೆ ಚರ್ಚೆ ಮಾಡಿದ್ದು, ಸಾಕಷ್ಟು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಸಂಸದ ಶಶಿತರೂರ್‌ ಹೇಳಿದ್ದಾರೆ.

ADVERTISEMENT

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಸಂದೇಶ ಬಹಳ ಸರಳವಾಗಿದೆ. ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ದುರಾಡಳಿತವಿದೆ. ಪರಿಣಾಮ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಕಾಂಗ್ರೆಸ್ ಪಕ್ಷ ಈ ಸಮಸ್ಯೆಗಳಿಗೆ ಪರಿಹಾರ ನೀಡಲು ಕೆಲವು ಕಾರ್ಯಕ್ರಮ ರೂಪಿಸಿದೆ. ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ, ಮನೆಯೊಡತಿಗೆ ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಲಾಗಿದೆ ಎಂದರು.

ವಿಶ್ವ ವಿಖ್ಯಾತಿ ಪಡೆದಿದ್ದ ಬೆಂಗಳೂರು ವಾಸ ಯೋಗ್ಯ ನಗರಗಳ ಪಟ್ಟಿಯಲ್ಲಿ ಕುಸಿತ ಕಂಡಿದೆ. ಸಂಚಾರ ದಟ್ಟಣೆ ಹೆಚ್ಚಾಗಿದೆ. ಹೀಗೆ ಅನೇಕ ಸಮಸ್ಯೆಗಳು ರಾಜ್ಯ ಹಾಗೂ ಬೆಂಗಳೂರು ನಗರವನ್ನು ಕಾಡುತ್ತಿವೆ. ಸರ್ಕಾರದ ಆಡಳಿತದಲ್ಲಿ ಬದ್ಧತೆ ಇಲ್ಲವಾಗಿದ್ದು, ದಕ್ಷ ಆಡಳಿತ ನೀಡಲು ಕಾಂಗ್ರೆಸ್ ಸರ್ಕಾರ ಸಮರ್ಥವಾಗಿದೆ. ಇನ್ನು ಜನರು 40% ಕಮಿಷನ್ ಸರ್ಕಾರಿದಿಂದ ಬೇಸತ್ತಿದ್ದು, ಕಾಂಗ್ರೆಸ್ ಸರ್ಕಾರ ಜನರ ಹಿತ ಕಾಯಲು 100% ಬದ್ಧತೆ ನೀಡಲಿದೆ.

ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ಮುಖ್ಯಮಂತ್ರಿ ಆಗುವರೇ ಎಂದು ಕೇಳಿದ ಪ್ರಶ್ನೆಗೆ, ‘ಖರ್ಗೆ ಅವರು ನನ್ನ ಗೌರವಯುತ ಅಧ್ಯಕ್ಷರು. ನಾವೆಲ್ಲರೂ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಘೋಷಣೆ ಮಾಡುವ ಸಂಪ್ರದಾಯವಿಲ್ಲ. ಇದು ಆರೋಗ್ಯಕರ ಪ್ರಕ್ರಿಯೆಯಾಗಿದ್ದು, ಮೊದಲು ಚುನಾವಣೆ ಗೆಲ್ಲಬೇಕು, ನಂತರ ಈ ವಿಚಾರವಾಗಿ ಚರ್ಚೆ ಮಾಡಬಹುದು’ ಎಂದು ತಿಳಿಸಿದರು.

ಅಮೂಲ್ ಹಾಗೂ ನಂದಿನಿ ವಿವಾದದ ಬಗ್ಗೆ ಕೇಳಿದಾಗ, ‘ನಾವೆಲ್ಲರೂ ಪ್ರೀತಿಯಿಂದ ಬೆಳೆಸಿರುವ ನಂದಿನಿಯನ್ನು ಕಾಪಾಡಿಕೊಳ್ಳಬೇಕು. ರಾಜ್ಯದ ಜನರು ನಂದಿನಿ ವಿಚಾರದಲ್ಲಿ ವ್ಯಕ್ತಪಡಿಸುವ ಅಭಿಪ್ರಾಯವನ್ನು ಎಲ್ಲರೂ ಆಲಿಸಬೇಕು. ಎಂ.ವಿ ಕೃಷ್ಣಪ್ಪ ಅವರು ಬೆಂಗಳೂರು ಡೇರಿ ಸ್ಥಾಪಿಸಿದ್ದು, ಕರ್ನಾಟಕ ಬಿಜೆಪಿ ಆಡಳಿತದಲ್ಲಿ ಸಾಕಷ್ಟು ಕರ್ನಾಟಕದ ಬ್ರ್ಯಾಂಡ್ ಗಳನ್ನು ಕಳೆದುಕೊಂಡಿದೆ. ಸ್ಟೋಟ್ ಬ್ಯಾಂಕ್ ಆಫ್ ಮೈಸೂರು, ವಿಜಯ ಬ್ಯಾಂಕ್, ಸಿಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಗಳನ್ನು ವಿಲೀನದ ಹೆಸರಲ್ಲಿ ನಾಶ ಮಾಡಿದ್ದಾರೆ. ಅಮಿತ್ ಶಾ ಅವರು ಸಹಕಾರ ಇಲಾಖೆ ಸಚಿವರಾಗಿರುವುದೇ ಸಹಕಾರ ಕ್ಷೇತ್ರದಲ್ಲಿ ಈ ರೀತಿ ಗೊಂದಲ ಸೃಷ್ಟಿಸಲು. ಬಿಜೆಪಿ ಆಡಳಿತದಲ್ಲಿ ನಿಂದಿನಿ ಹಾಗೂ ಕೆಎಂಎಫ್ ಅಪಾಯಕ್ಕೆ ಸಿಲುಕಿದ್ದು, ಕರ್ನಾಟಕದಲ್ಲಿ ಪ್ರತಿಯೊಬ್ಬರೂ ನಂದಿನಿ ರಕ್ಷಣೆಗೆ ಮುಂದಾಗಬೇಕು’ ಎಂದು ತಿಳಿಸಿದರು.

ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಶಾಸಕರ ಸೇರ್ಪಡೆ ವಿಚಾರವಾಗಿ ಕೇಳಿದಾಗ, ‘ಕರ್ನಾಟಕದಲ್ಲಿ ಕಳೆದ ಕೆಲವು ತಿಂಗಳಲ್ಲಿ 5 ಶಾಸಕರು, 2 ಎಂಎಲ್ ಸಿ, 11 ಮಾಜಿ ಶಾಸಕರು, 4 ಮಾಜಿ ಎಂಎಲ್ ಸಿ, 1 ಮಾಜಿ ಸಂಸದರು ಕಾಂಗ್ರೆಸ್ ಪಕ್ಷ ಸೇರಿದ್ದು, ಬೇರೆ ಪಕ್ಷದ ನಾಯಕರು ಕೂಡ ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಗೆಲವು ಸಾಧಿಸಲಿದೆ ಎಂದು ನಂಬಿರುವುದಕ್ಕೆ ಸಾಕ್ಷಿ. ರಾಜಕೀಯ ನಾಯಕರು ತಮ್ಮ ಸಿದ್ದಾಂತಕ್ಕೆ ವಿರೋಧವಾಗಿ ಪಕ್ಷಾಂತರ ಮಾಡುವುದು ಬೇಸರದ ವಿಚಾರ. ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಪಕ್ಷ ಸೇರ್ಪಡೆಯಾದರೆ ಉತ್ತಮ. ರಾಜಕೀಯ ಎಂದರೆ ಸಿದ್ಧಾಂತ, ಮೌಲ್ಯ, ತತ್ವಗಳ ಆಧಾರದ ಮೇಲೆ ನಿಂತಿವೆ’ ಎಂದು ತಿಳಿಸಿದರು.

ರಾಜ್ಯದಲ್ಲಿ ಜನರು ಕಾಂಗ್ರೆಸ್ ಪಕ್ಷದ ಕಡೆ ಒಲವು ತೋರುತ್ತಿದ್ದಾರೆ. ನಾನು ಇಲ್ಲಿ 2 ದಿನಗಳ ಕಾಲ ಪ್ರಚಾರ ಮಾಡುತ್ತಿದ್ದು, ನಿನ್ನೆ ಯುವ ಮತದಾರರ ಜತೆ ಮಾತುಕತೆ ನಡೆಸಿದ್ದು, ಇಂದು ಶಿಕ್ಷಕರ ಜತೆ ಚರ್ಚೆ ಮಾಡಿದ್ದೇನೆ. ಜನರು ಕಳೆದ ನಾಲ್ಕು ವರ್ಷಗಳ ದುರಾಡಳಿತದಿಂದ ಬೇಸರವಾಗಿ ಕಾಂಗ್ರೆಸ್ ಸರ್ಕಾರವನ್ನು ಬಯಸುತ್ತಿದ್ದಾರೆ. ಬೆಂಗಳೂರು ಅತಿ ಹೆಚ್ಚು ವಿದೇಶಿ ಬಂಡವಾಳವನ್ನು ಆಕರ್ಷಿಸುತ್ತಿತ್ತು. ಆದರೆ ಈಗ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಬಂಡವಾಳ ಹೂಡಿಕೆ ಬೇರೆ ರಾಜ್ಯಗಳ ಪಾಲಾಗುತ್ತಿವೆ. ಇದು ದುರಾಡಳಿತಕ್ಕೆ ಸಾಕ್ಷಿ. ರಾಜ್ಯದಲ್ಲಿ ಬದಲಾವಣೆ ಅಗತ್ಯವಾಗಿದ್ದು, ಈ ಬಾರಿ ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ. ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಬಿಜೆಪಿಯ ಕೆಟ್ಟ ಆಪರೇಷನ್ ಕಮಲ ಸಂಪ್ರದಾಯಕ್ಕೆ ಅವಕಾಶ ನೀಡಬಾರದ’ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಮುಸಲ್ಮಾನರಿಗೆ ಹೆಚ್ಚಿನ ಟಿಕೆಟ್ ನೀಡಲಿಲ್ಲ ಎಂಬ ಅಸಮಾಧಾನದ ಬಗ್ಗೆ ಕೇಳಿದಾಗ, ‘ಇನ್ನು ಹಲವು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿ ಘೋ,ಣೆ ಬಾಕಿ ಇವೆ. ಮುಸಲ್ಮಾನರು ಸೇರಿದಂತೆ ಕ್ರೈಸ್ತ ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಪ್ರಾತಿನಿದ್ಯ ನೀಡಲಾಗುವುಜದು. ಕಾಂಗ್ರೆಸ್ ಪಕ್ಷ ಎಂದಿಗೂ ಯಾವ ಸಮುದಾಯಕ್ಕೂ ತಾರತಮ್ಯ ಮಾಡುವುದಿಲ್ಲ. ಸ್ವತ್ತಂರ್ಯ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ದೇಶದದಲ್ಲಿ ಯಾವುದೇ ಮುಸಲ್ಮಾನ ಸಂಸದ ಹಾಗೂ ಶಾಸಕರನ್ನು ಹೊಂದಿಲ್ಲದೇ ಇರುವುದು ಇದೇ ಮೊದಲು. ಇದು ನಾಚಿಕೆಗೇಡಿನ ವಿಚಾರ. ಈ ದೇಶವನ್ನು ಆಳುವವರು ದೇಶದ ವೈವಿದ್ಯತೆ ಪ್ರತಿನಿಧಿಸಬೇಕು. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ಸಮುದಾಯಗಳಿಗೆ ಸೂಕ್ತಪ್ರಾತಿನಿಧ್ಯ ನೀಡಲಾಗಿದೆ’ ಎಂದು ತಿಳಿಸಿದರು.

ರಾಹುಲ್ ಗಾಂಧಿ ಅವರ ಅನರ್ಹತೆಯನ್ನು ಕಾಂಗ್ರೆಸ್ ಹೇಗೆ ಪ್ರಯೋಜನ ಪಡೆಯಲಿದೆ ಎಂದು ಕೇಳಿದಾಗ, ‘ಸಾರ್ವಜನಿಕರಲ್ಲಿ ಈ ಅನರ್ಹತೆ ನ್ಯಾಯಸಮ್ಮತವಲ್ಲ ಎಂಬ ಭಾವನೆ ವ್ಯಕ್ತವಾಗಿದೆ. ಅವರ ಭಾಷಣದ ವಿಚಾರವಾಗಿ ಗರಿಷ್ಠ ಶಿಕ್ಷೆ ವಿಧಿಸಿರುವುದು ಸೂಕ್ತವಲ್ಲ ಅನರ್ಹತೆ ಕೂಡ ಸರಿಯಲ್ಲ ಎಂದು ತಿಳಿಸಿದ್ದಾರೆ. ಬಿಜೆಪಿ ಮತದಾರರು ಕೂಡ ಇದನ್ನು ಖಂಡಿಸಿದ್ದಾರೆ. ಈ ವಿಚಾರವಾಗಿ ನಾವು ಕಾನೂನು ಹೋರಾಟ ಮಾಡುತ್ತಿದ್ದೇವೆ. ಸಾರ್ವಜನಿಕ ವಲಯದಲ್ಲಿ ಸರ್ಕಾರ ವಿರೋಧ ಪಕ್ಷಗಳ ಧ್ವನಿ ಅಡಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಚರ್ಚೆ ಆಗುತ್ತಿದೆ. ಕರ್ನಾಟಕ ಚುನಾವಣೆ ಸಮಯದಲ್ಲಿ ಈ ವಿಚಾರ ಚರ್ಚೆಯಾಗುತ್ತಿದ್ದು, ನಾವು ಮೊದಲು ಸ್ಥಳೀಯ ವಿಚಾರವನ್ನು ಪ್ರಸ್ತಾಪಿಸುತ್ತೇವೆ. ಇದರ ಜತೆಗೆ ರಾಹುಲ್ ಗಾಂಧಿ ಅವರ ಅನರ್ಹತೆ, ರಾಷ್ಟ್ರೀಯ ಭದ್ರತೆ, ಬಡವಾಳಶಾಹಿಗಳ ಕ್ಷಮೆ ವಿಚಾರಗಳನ್ನು ಕೆಲವು ಕಡೆಗಳಲ್ಲಿ ಪ್ರಸ್ತಾಪಿಸುತ್ತೇವೆ’ ಎಂದು ತಿಳಿಸಿದರು.

ಮೋದಿ ಅವರ ಬಂಡಿಪುರ ಪ್ರವಾಸದ ಬಗ್ಗೆ ಕೇಳಿದಾಗ, ‘ಮೋದಿ ಅವರು ಹುಲಿ ಸಂರಕ್ಷಣೆ ವಿಚಾರವಾಗಿ ಬಂಡೀಪುರ ಪ್ರವಾಸ ಮಾಡುತ್ತಿದ್ದು, ಮೋದಿ ಅವರು ಕನ್ನಡಿಗರ ಹಿತಾಸಕ್ತಿಯ ಬಗ್ಗೆಯೂ ಆಲೋಚನೆ ಮಾಡಿದರೆ ಉತ್ತಮ’ ಎಂದು ಹೇಳಿದರು. ಹುಲಿ ಸಂರಕ್ಷಣೆ ಕಾಂಗ್ರೆಸ್ ಕಾರ್ಯಕ್ರಮವಲ್ಲವೇ ಎಂದು ಕೇಳಿದಾಗ, ‘ಪ್ರಾಜೆಕ್ಟ್ ಟೈಗರ್ ಕಾರ್ಯಕ್ರಮವನ್ನು ಇಂದಿರಾ ಗಾಂಧಿ ಅವರು ಆರಂಭಿಸಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಹುಲಿ ಸಂರಕ್ಷಣೆ ಹಾಗೂ ಹುಲಿಗಳ ಸಂಖ್ಯೆ ಹೆಚ್ಚಳಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಬೇರೆ ಸರ್ಕಾರಗಳು ಕೂಡ ಇದಕ್ಕೆ ಕೈಜೋಡಿಸಿವೆ’ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದರೆ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಸಂಘರ್ಷ ವ್ಯಕ್ತವಾಗಬಹುದೇ ಎಂದು ಕೇಳಿದಾಗ, ‘ಅವರಿಬ್ಬರೂ ಒಟ್ಟಾಗಿ ಈ ಚುನಾವಣೆ ಎದುರಿಸುತ್ತಿರುವುದಾಗಿ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಸತ್ಯ ಏನೆಂದರೆ ಎಲ್ಲ ಪಕ್ಷದಲ್ಲೂ ನಾಯಕರ ಸಾಮರ್ಥ್ಯಗಳು ಹಾಗೂ ಆಕಾಂಕ್ಷೆಗಳ ಮಧ್ಯೆ ಸ್ಪರ್ಧೆ ಸಹಜ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಯಾರಾದರೂ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ಈಗ ಪಕ್ಷ ಒಗ್ಗಟ್ಟಿನಿಂದ ಹೋರಾಡಲು ತೀರ್ಮಾನಿಸಿದ್ದಾರೆ. ರಾಜ್ಯದ ಜನರ ಹಿತಾಸಕ್ತಿ ಕಾಯಲು ಈ ಸರ್ಕಾರವನ್ನು ಕಿತ್ತೊಗೆಯಲೇ ಬೇಕು’ ಎಂದು ತಿಳಿಸಿದರು.

Tags: 2023 election2023 Election Resultassembly electionBJPBSYCMCongress PartyElection Commissionelection resultHDKJanasankalpa YatreJDSKarnataka ElectionPancharatna YatrePratidhvanishashi taroorsiddaramaiahState ElectionVijayasankalpa
Previous Post

SINDAGI | ಸಿಂದಗಿ ವಿಧಾನ ಸಭಾ ಕ್ಷೇತ್ರದಲ್ಲಿ ಗೆಲುವಿನ ಮಾಲೆ ಯಾರಿಗೆ? #PRATIDHVANI

Next Post

ಜೆಡಿಎಸ್​ನಿಂದ ಹಣ ಹಂಚಿಕೆ ಪಾಲಿಟಿಕ್ಸ್​ : ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ನೋಟು ಹಿಡಿದು ನಿಂತ ಹೆಚ್​​ಡಿಕೆ

Related Posts

ರಾಜ್ಯಪಾಲರ ಫೋನ್‌ ಕದ್ದಾಲಿಕೆ ಮಾಡ್ತಿದೆಯಾ ಕಾಂಗ್ರೆಸ್‌ ಸರ್ಕಾರ..?
ಇದೀಗ

ರಾಜ್ಯಪಾಲರ ಫೋನ್‌ ಕದ್ದಾಲಿಕೆ ಮಾಡ್ತಿದೆಯಾ ಕಾಂಗ್ರೆಸ್‌ ಸರ್ಕಾರ..?

by ಪ್ರತಿಧ್ವನಿ
January 28, 2026
0

ಬೆಂಗಳೂರು : ವಿಧಾನಭೆಯಲ್ಲಿಂದು ಆಡಳಿತ ಮತ್ತು ವಿಪಕ್ಷಗಳ ನಡುವೆ ಟೀಕಾ ಪ್ರಹಾರ ಜೋರಾಗಿಯೇ ನಡೆದಿದೆ. ರಾಜ್ಯಪಾಲರಿಗೆ ಕೇಶವ ಕೃಪಾದಿಂದ ಫೋನ್‌ ಕರೆಗಳು ಬರುತ್ತವೆ. ಜಂಟಿ ಅಧಿವೇಶನದಲ್ಲಿ ಭಾಷಣ...

Read moreDetails
ಅಜಿತ್‌ ಪವಾರ್‌ NDA ಕೂಟ ಬಿಟ್ಟು, INDIA ಒಕ್ಕೂಟ ಸೇರ್ಪಡೆಯಾಗಬೇಕಿತ್ತು: ವಿಮಾನ ಅಪಘಾತಕ್ಕೆ ದೀದಿ ಸ್ಪೋಟಕ ತಿರುವು..?

ಅಜಿತ್‌ ಪವಾರ್‌ NDA ಕೂಟ ಬಿಟ್ಟು, INDIA ಒಕ್ಕೂಟ ಸೇರ್ಪಡೆಯಾಗಬೇಕಿತ್ತು: ವಿಮಾನ ಅಪಘಾತಕ್ಕೆ ದೀದಿ ಸ್ಪೋಟಕ ತಿರುವು..?

January 28, 2026
Siddaramaiah: ಸಿಎಂ ಸಿದ್ದರಾಮಯ್ಯಗೆ ನ್ಯಾಯಾಲಯದಿಂದ ಬಿಗ್ ರಿಲೀಫ್

Siddaramaiah: ಸಿಎಂ ಸಿದ್ದರಾಮಯ್ಯಗೆ ನ್ಯಾಯಾಲಯದಿಂದ ಬಿಗ್ ರಿಲೀಫ್

January 28, 2026
ಸದನದ ನಿಯಾಮವಳಿ ಪುಸ್ತಕ ಹರಿದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ: ಯಾಕೆ..?

ಸದನದ ನಿಯಾಮವಳಿ ಪುಸ್ತಕ ಹರಿದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ: ಯಾಕೆ..?

January 28, 2026
ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌

ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌

January 28, 2026
Next Post
ಜೆಡಿಎಸ್​ನಿಂದ ಹಣ ಹಂಚಿಕೆ ಪಾಲಿಟಿಕ್ಸ್​ : ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ನೋಟು ಹಿಡಿದು ನಿಂತ ಹೆಚ್​​ಡಿಕೆ

ಜೆಡಿಎಸ್​ನಿಂದ ಹಣ ಹಂಚಿಕೆ ಪಾಲಿಟಿಕ್ಸ್​ : ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ನೋಟು ಹಿಡಿದು ನಿಂತ ಹೆಚ್​​ಡಿಕೆ

Please login to join discussion

Recent News

ಸದನದ ನಿಯಾಮವಳಿ ಪುಸ್ತಕ ಹರಿದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ: ಯಾಕೆ..?
Top Story

ಸದನದ ನಿಯಾಮವಳಿ ಪುಸ್ತಕ ಹರಿದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ: ಯಾಕೆ..?

by ಪ್ರತಿಧ್ವನಿ
January 28, 2026
ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌
Top Story

ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
January 28, 2026
‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ: 1 ಕೋಟಿ ರೂ ಕೃತಿಚೌರ್ಯ ಕೇಸ್‌ ಹಾಕಲು ನಿರ್ಧಾರ..!
Top Story

‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ: 1 ಕೋಟಿ ರೂ ಕೃತಿಚೌರ್ಯ ಕೇಸ್‌ ಹಾಕಲು ನಿರ್ಧಾರ..!

by ಪ್ರತಿಧ್ವನಿ
January 28, 2026
JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?
Top Story

JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?

by ಪ್ರತಿಧ್ವನಿ
January 28, 2026
ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್
Top Story

ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
January 28, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಹಿರಿಯ ಹೋರಾಟಗಾರ ಅನಂತ್ ಸುಬ್ಬರಾವ್ ಇನ್ನಿಲ್ಲ

ಹಿರಿಯ ಹೋರಾಟಗಾರ ಅನಂತ್ ಸುಬ್ಬರಾವ್ ಇನ್ನಿಲ್ಲ

January 28, 2026
ರಾಜ್ಯಪಾಲರ ಫೋನ್‌ ಕದ್ದಾಲಿಕೆ ಮಾಡ್ತಿದೆಯಾ ಕಾಂಗ್ರೆಸ್‌ ಸರ್ಕಾರ..?

ರಾಜ್ಯಪಾಲರ ಫೋನ್‌ ಕದ್ದಾಲಿಕೆ ಮಾಡ್ತಿದೆಯಾ ಕಾಂಗ್ರೆಸ್‌ ಸರ್ಕಾರ..?

January 28, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada