ಶಿವನ ಅನುಗ್ರಹಕ್ಕಾಗಿ ಉಪವಾಸ, ಜಾಗರಣೆ ಮಾಡುತ್ತಾರೆ. ಆದರೆ ವಿಶೇಷವಾಗಿ ಈ ವರ್ಗದ ಜನರು ಶಿವರಾತ್ರಿ ವ್ರತದ ಆಚರಣೆ ಮಾಡಬಾರದು.

ಶಿವ ಪುರಾಣದ ಉಲ್ಲೇಖದಂತೆ, ಗರ್ಭಿಣಿಯರಿಗೆ ಮತ್ತು ಬಾಣಂತಿಯರು ಆಹಾರ ಬಿಟ್ಟು ಉಪವಾಸ ವ್ರತ ಮಾಡಬಾರದು. ಭಕ್ತಿಪೂರ್ವಕವಾಗಿ ಪೂಜೆ, ದೇವರ ನಾಮಸ್ಮರಣೆ ಮಾತ್ರ ಮಾಡಬೇಕು.

ಜ್ಯೋತಿಷ್ಯ ಮತ್ತು ವೈದ್ಯಕೀಯ ಶಾಸ್ತ್ರದ ಪ್ರಕಾರ, ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಅಥವಾ ಕಿಡ್ನಿ ಸಮಸ್ಯೆ ಇರುವವರು ಉಪವಾಸ ಮಾಡುವುದು ಅಪಾಯಕಾರಿ. ಹಾಗಾಗಿ ಉಪವಸ ಮಾಡದೆ, ದೇವರ ಪೂಜೆ, ದೇವರ ನಾಮಸ್ಮರಣೆ, ಜಪ ಇವುಗಳನ್ನು ಮಾತ್ರ ಮಾಡಬಹುದು.

ವಯಸ್ಸಾದವರು, ಅಶಕ್ತರಾದವರು ಉಪವಾಸ ವ್ರತ ಮಾಡುವುದು ಶಿವನಿಗೆ ಪ್ರಿಯವಲ್ಲ. ವೃದ್ಧರು ಕೇವಲ ಶಿವ ಮಂತ್ರಗಳನ್ನು ಪಠಿಸುವ ಮೂಲಕ ಅಥವಾ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆಯುವ ಮೂಲಕ ಶಿವರಾತ್ರಿ ಆಚರಣೆ ಮಾಡಬಹುದು.

ಧರ್ಮಶಾಸ್ತ್ರಗಳ ಪ್ರಕಾರ, ಅಶಕ್ತರು ಅಥವಾ ಅನಾರೋಗ್ಯ ಪೀಡಿತರು ಉಪವಾಸ ಮಾಡಲು ಸಾಧ್ಯವಾಗದಿದ್ದಾಗ ದೇವರನ್ನು ಮನಸ್ಸಿನಲ್ಲಿಯೇ ಆರಾಧಿಸಿ ಪೂಜೆ ಮಾಡಿ ನಾಮಸ್ಮರಣೆ ಮಾಡಿದರೂ ಪುಣ್ಯ ದೊರೆಯುತ್ತದೆ.ಈ ಮೇಲಿನ ವರ್ಗದವರು ಕಟ್ಟುನಿಟ್ಟಿನ ಉಪವಾಸ ಮಾಡದಿದ್ದರೂ, ಶುದ್ಧ ಮನಸ್ಸಿನಿಂದ ಶಿವನನ್ನು ಸ್ಮರಿಸಿದರೆ ದೇವರು ಮೆಚ್ಚಿಕೊಳ್ಳುತ್ತಾನೆ.






