
ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ದೇಶದಲ್ಲಿ ಎನ್‌ಡಿಎಗೆ ಸರ್ಕಾರ ನಡೆಸಲು ಜನರು ಅವಕಾಶ ಕೊಟ್ಟಿದ್ದಾರೆ. ಅಭಿವೃದ್ಧಿ ಮಾಡುವುದರ ಬದಲಾಗಿ ಆರೋಪ ಪ್ರತ್ಯಾರೋಪ, ದೂಷಣೆ ಮಾಡುತ್ತಾ ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದರೆ ಜನ ಕಲ್ಲಲ್ಲಿ ಹೊಡೆಯೋದು ಫಿಕ್ಸ್ ಎಂದು ಡಿಕೆ ಸುರೇಶ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು. ರಾಜ್ಯ ರಾಜಕಾರಣವನ್ನು ಗಮನಿಸಿದರೆ ನಾಯಕರೆಲ್ಲ ವೈಯಕ್ತಿಕಕ್ಕೆ ರಾಜಕೀಯವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯದ ಹಿತದೃಷ್ಟಿಯಿಂದ ಒಳ್ಳೆದಲ್ಲ ಹೀಗೆ ಮುಂದುವರೆದರೆ ಜನ ಸಿಕ್ಕಲ್ಲೆಲ್ಲ ಕಲ್ಲಲ್ಲಿ ಹೊಡೆಯುತ್ತಾರೆ ಎಂದರು.
ರಾಜ್ಯದಲ್ಲಿ ಅಭಿವೃದ್ದಿಯ ಬದಲಾಗಿ ಆರೋಪ – ಸೇಡಿನ ರಾಜಕಾರಣ ನಡೆಸುತ್ತಾ ದೂಷಣೆ ಮಾಡುತ್ತಾ, ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದಾರೆ. ದಸರಾ ವೇಳೆ ಚಾಮುಂಡೇಶ್ವರಿ ಪೂಜಿಸುವ ಸಂದರ್ಭದಲ್ಲಿ ನೊಂದು ಹೇಳುತ್ತಿದ್ದೇನೆ.ಈ ರೀತಿ ಬೀದಿಯಲ್ಲಿ ಕಿತ್ತಾಟ ಮಾಡೋದು ಸರಿಯೇ ಎಂದು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.
ಸದ್ಯದ ರಾಜ್ಯ ರಾಜಕೀಯ ಪರಿಸ್ಥಿತಿ ನೋಡಿದರೆ ಜನರಿಗೆ ಸರ್ಕಾರದ ಬಗ್ಗೆ ಎಳ್ಳಷ್ಟೂ ನಂಬಿಕೆಯಿಲ್ಲ. ನಾನು ಮೂರು ಪಕ್ಷದವರಿಗೆ ಎಚ್ಚರಿಕೆಯನ್ನು ನೀಡುತ್ತಿದ್ದೇನೆ ಇದೆ ರೀತಿ ವಿಚಾರವನ್ನು ದೊಡ್ಡದು ಮಾಡುತ್ತಾ ಹೋದರೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಸುರೇಶ್ ಹೇಳಿದರು.










