ಅವಕಾಶವಾದ ರಾಜಕಾರಣಕ್ಕಾಗಿ ಜನರನ್ನು ವಿಭಜಿಸಲಾಗುತ್ತಿದೆ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ಥ್ಯ ಸೇನ್ ಅಭಿಪ್ರಾಯಪಟ್ಟಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಹಲವು ವರ್ಷಗಳೇ ಕಳೆದರು ಸಹ ರಾಜಕೀಯ ವೈರತ್ವಕ್ಕಾಗಿ ಜನರನ್ನು ಬಂಧಿಸುವ ವಸಾಹತುಶಾಹಿ ಪದ್ದತಿ ಇನ್ನು ಜೀವಂತವಾಗಿದೆ ಎಂದು ವಿಷಾದಿಸಿದ್ದಾರೆ.
ಭಾರತೀಯರನ್ನು ರಾಜಕೀಯ ಉದ್ದದೇಶಕ್ಕಾಗಿ ಹಿಂದು- ಮುಸ್ಲಿಂ ಎಂದು ವಿಭಜಿಸಲಾಗುತ್ತಿದೆ ಎಂದು ʻಆನಂದ್ ಬಜಾರ್ʼ ಪತ್ರಿಕೆ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಆನಂದ್ ಬಜಾರ್ ಮೊದಲ ಆವೃತ್ತಿಯು ಮಾರ್ಚ್ 13, 1922ರಂದು ಪ್ರಕಟವಾಗಿತ್ತು. ಪ್ರಫುಲ್ಲಾಕುಮಾರ್ ಸರ್ಕಾರ್ ಇದರ ಸಂಸ್ಥಾಪಕ ಸಂಪಾದಕರಾಗಿದ್ದರು.
ಸ್ವತಂತ್ರ ಪೂರ್ವ ಸಮಯದಲ್ಲಿ ರಾಜಕೀಯ ಕಾರಣಗಳಿಗಾಗಿ ದೇಶದಲ್ಲಿ ಹಲವಾರು ಜನರು ಜೈಲು ಪಾಲಾಗಿದ್ದರು. ನಾನು ಆಗ ತುಂಬಾ ಚಿಕ್ಕವನಿದೆ ಮತ್ತು ಅಪರಾಧ ಮಾಡದ ಜನರನ್ನು ಸುಮ್ಮನೆ ಜೈಲಿಗೆ ಕಳುಹಿಸುವ ಈ ಅಭ್ಯಾಸ ಎಂದಿಗೆ ನಿಲ್ಲುತ್ತದೆ ಎಂದು ಪ್ರಶ್ನಿಸುತ್ತಿದೆ ಎಂದು ಸೇನ್ ಮಾತನಾಡುವ ವೇಳೆ ಹೇಳಿದ್ದಾರೆ.
ತುರವಾಯ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ಆದರೆ, ಈ ಪದ್ದತಿ ಇನ್ನು ಅಸ್ತಿತ್ವದಲ್ಲಿದೆ ಎಂದು 88 ವರ್ಷದ ಅಮರ್ಥ್ಯ ಸೇನ್ ಬೇಸರಿಸಿದ್ದಾರೆ.