ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನ ಹೆಣ್ಣು ಮಕ್ಕಳಿಗೆ ಕಾಡುತ್ತಿರುವಂತಹ ಸಮಸ್ಯೆ ಅಂದ್ರೆ ಪಿಸಿಓಡಿ,ಪಿಸಿಓಡಿ ತೊಂದರೆಯಿಂದ ಮಹಿಳೆಯರ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ.ಮುಖ್ಯವಾಗಿ ಪೀರಿಯಡ್ಸ್ ಪ್ರಾಬ್ಲಮ್ ಎದುರಾಗುತ್ತದೆ. ಕೆಲವರಿಗೆ ಇರ್ರೇಗುಲರ್ ಪಿರಿಯಡ್ಸ್ ಆಗುತ್ತದೆ, ಇನ್ನು ಹಲವರಿಗೆ ಮುಟ್ಟು ಆಗುವುದೇ ಇಲ್ಲ ಈ ತಿಂಗಳಾದರೆ ಇನ್ನೆಷ್ಟು ದಿನ ಬಿಟ್ಟು ಮತ್ತೆ ಮುಟ್ಟಾಗುವಂತದ್ದು ಇರುತ್ತದೆ..

ಪಿಸಿಓಡಿ ಹೆಚ್ಚಾದ್ರೆ ಮುಟ್ಟಿನ ತೊಂದರೆಯ ಜೊತೆಗೆ ಮುಖದಲ್ಲಿ ಅತಿಯಾಗಿ ಮೊಡವೆಗಳು ಶುರುವಾಗುತ್ತದೆ ,ಕೂದಲ ಬೆಳವಣಿಗೆ ಹೆಚ್ಚಾಗುತ್ತದೆ ಹಾಗೂ ಸಾಕಷ್ಟು ಜನ ಹೆಣ್ಣುಮಕ್ಕಳಿಗೆ ಇದ್ದಕಿದ್ದ ಹಾಗೆ ತೂಕ ಜಾಸ್ತಿ ಆಗುತ್ತದೆ. ಈ ಸಮಸ್ಯೆ ಶುರುವಾಗುವುದು ಜೀವನ ಶೈಲಿಯಿಂದ ಆದರೆ ಪಿಸಿಓಡಿಗೆ ಶಾಶ್ವತವಾಗಿ ಯಾವುದೇ ರೀತಿಯ ಚಿಕಿತ್ಸೆ ಇಲ್ಲ.ಹಾಗಾಗಿ ನಾವು ನಮ್ಮ ಉತ್ತಮ ಜೀವನಶೈಲಿಯನ್ನ ಹಾಗೂ ಆರೋಗ್ಯಕರ ಅಭ್ಯಾಸಗಳನ್ನು ನೋಡಿಕೊಳ್ಳುವುದರಿಂದ ಪಿಸಿಓಡಿ ಯನ್ನು ನಿಯಂತ್ರಿಸಬಹುದು.

ಇದೆಲ್ಲದರ ಜೊತೆಗೆ ಪಿಸಿಓಡಿ ಸಮಸ್ಯೆ ಇರುವವರು ಈ ಹಣ್ಣುಗಳನ್ನ ಸೇವಿಸುವುದರಿಂದ ಅಥವಾ ಈ ಹಣ್ಣುಗಳ ಜ್ಯೂಸ್ ಅನ್ನ ಕುಡಿಯುವುದರಿಂದ ತುಂಬಾನೇ ಒಳ್ಳೆಯದು.
ದಾಳಿಂಬೆ ಹಣ್ಣು
ದಾಳಿಂಬೆ ಹಣ್ಣನ್ನ ಸೇವಿಸುವುದರಿಂದ ಅಥವಾ ಅದರ ಜ್ಯೂಸನ್ನು ಕುಡಿಯುವುದರಿಂದ ಉತ್ಕರ್ಷಣ ನಿರೋಧಕಗಳು ಪ್ಲೋಲೇಟ್ ಫೈಬರ್ ಪ್ರೋಟೀನ್ ಮತ್ತು ಫ್ಯಾಟಿ ಆಸಿಡ್ ಅಂಶ ನಮ್ಮ ದೇಹಕ್ಕೆ ಸಿಗುತ್ತದೆ. ಇದು ನಮ್ಮ ದೇಹದಲ್ಲಿ ಉರಿಯುತವನ್ನು ಕಡಿಮೆ ಮಾಡುತ್ತದೆ ಹಾಗೂ ಮುಖ್ಯವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ಬ್ಯಾಲೆನ್ಸ್ ಮಾಡುತ್ತದೆ.

ಬೆರ್ರಿಸ್
ಸ್ಟ್ರಾಬೆರಿ, ಬ್ಲಾಕ್ ಬೆರ್ರಿ, ಬ್ಲೂ ಬೆರಿ ಈ ಹಣ್ಣುಗಳನ್ನ ಸೇವಿಸುವುದರಿಂದ ಫ್ಲೋಲೆಟ್ ಅಂಶ ಹೆಚ್ಚಿರುತ್ತದೆ .ಮಹಿಳೆಯರಿಗೆ ನ್ಯೂಟ್ರಿಷನ್ ನ ಒದಗಿಸುತ್ತದೆ ಹಾಗೂ ಕನ್ಸೀವ್ ಆಗುವುದಕ್ಕೂ ತುಂಬಾನೇ ಒಳ್ಳೆಯದು. ಹಾಗೂ ಮುಖ್ಯವಾಗಿ ಆಂಟಿಆಕ್ಸಿಡೆಂಟ್ ಅಂಶ ಹೆಚ್ಚಿರುವುದರಿಂದ ಪಿಸಿಓಡಿ ಸಮಸ್ಯೆಗೆ ಉತ್ತಮ.

ಸೇಬು
ಪಿಸಿಓಡಿ ಸಮಸ್ಯೆಗೆ ಸೇಬು ಬೆಸ್ಟ್ ಹಣ್ಣಾಗಿದೆ. ಮುಖ್ಯವಾಗಿ ಸೇಬಲ್ಲಿ ಫೈಬರ್ ಅಂಶ ಹೆಚ್ಚಿದೆ. ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಇದರ ಜೊತೆಗೆ ತೂಕವನ್ನು ನಿಯಂತ್ರಿಸುವುದಕ್ಕೂ ಕೂಡ ತುಂಬಾನೇ ಸಹಕಾರಿ. ಇದೆಲ್ಲದರ ಜೊತೆಗೆ GI ಕಡಿಮೆ ಹೊಂದಿರುತ್ತದೆ .ಇದರಿಂದ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಒಳ್ಳೆಯದು.

ಇಷ್ಟು ಮಾತ್ರವಲ್ಲದೇ ಪಿಸಿಓಡಿ ಸಮಸ್ಯೆ ಇದ್ದರೂ ತಮ್ಮ ಜೀವನ ಶೈಲಿಯನ್ನ ಮುಖ್ಯವಾಗಿ ಆಹಾರದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಹಾಗೂ ಪಪಾಯ, ಬಾಳೆಹಣ್ಣು ,ಅವಕಾಡೊ, ಕಿವಿ ಫ್ರೂಟ್ ,ದ್ರಾಕ್ಷಿ ,ಕಿತ್ತಳೆ ಹಣ್ಣು ಇವುಗಳನ್ನು ಸೇವಿಸುವುದರಿಂದ ಕೂಡ ಪಿಸಿಓಡಿ ಯನ್ನು ಬ್ಯಾಲೆನ್ಸ್ ಮಾಡ್ಬಹುದು.
