ಪ್ರಮುಖ ಹಣಕಾಸು ಸಂಸ್ಥೆ Paytm ಪೋಸ್ಟ್‌ಪೇಯ್ಡ್ ಸಾಲ(Post Paid Loan)ದ ವಿತರಣೆ ಪ್ರಮಾಣವನ್ನು ಶೇಕಡಾ 50ರಷ್ಟು ಕಡಿತಗೊಳಿಸುವ ನಿರ್ಧಾರ ಪ್ರಕಟಿಸಿದೆ.
ಈ ನಿರ್ಧಾರ ಪ್ರಕಟಿಸಿದ ಮರು ದಿನವೇ ಷೇರು ಮಾರುಕಟ್ಟೆಯಲ್ಲಿ ಪೇಟಿಎಂ ಷೇರು ಮೌಲ್ಯ ಶೇಕಡಾ 20ರಷ್ಟು ಕುಸಿತ ಕಂಡಿದೆ.
ಇವತ್ತು ಬೆಳಗ್ಗೆ ಷೇರು ಮಾರುಕಟ್ಟೆಯಲ್ಲಿ ದಿನದ ವ್ಯವಹಾರ ಆರಂಭ ಆದ ಬಳಿಕ ಪೇಟಿಎಂ ಷೇರು ಮೌಲ್ಯ 127 ರೂಪಾಯಿಯಷ್ಟು ಕುಸಿತ ಕಂಡಿದೆ.
ಪೋಸ್ಟ್ ಪೇಯ್ಡ್ ಸಾಲ ವಿತರಣೆ ಪ್ರಮಾಣ ಇಳಿಕೆಯಿಂದ ಲಾಭ ಕಡಿಮೆ ಆಗಲಿದೆ ಎಂಬ ಆತಂಕದಲ್ಲಿ ಷೇರು ಮೌಲ್ಯ ಕುಸಿದಿದೆ.
ಏನಿದು ಪೋಸ್ಟ್‌ಪೇಯ್ಡ್ ಸಾಲ ಯೋಜನೆ..?
Paytm Post Paid ಪೋಸ್ಟ್‌ಪೇಯ್ಡ್ ಸಾಲ ಯೋಜನೆ ಪ್ರಕಾರ ಪೇಟಿಎಂ ಬಳಕೆದಾರರು ಶಾಪಿಂಗ್ ಅಥವಾ ಟ್ರಾವೆಲಿಂಗ್ ಹೀಗೆ ಖರೀದಿ, ಬಿಲ್ ಪಾವತಿ, ರೀಚಾರ್ಜ್, ಟಿಕೆಟ್ ಬುಕ್ಕಿಂಗ್ ಮತ್ತು ಇತರೆ ಉದ್ದೇಶಗಳಿಗೆ 60 ಸಾವಿರ ರೂಪಾಯಿ ಸಾಲವನ್ನು ಪೇಟಿಎಂನಿಂದ ಪಡೆಯುವ ಅವಕಾಶವಿದೆ. ಈ ಸಾಲವನ್ನು ಪೇಟಿಎಂ Aditya Birla Finance Limited and Fullerton India Credit Company Limited ಮೂಲಕ ನೀಡುತ್ತದೆ.
ಈ ಸಾಲಕ್ಕೆ 30 ತಿಂಗಳವರೆಗೆ ಯಾವುದೇ ಬಡ್ಡಿ ಇರಲ್ಲ. ಆದರೆ ಸಾಲ ಪಡೆದು ಮುಂದಿನ ತಿಂಗಳ 7ನೇ ತಾರೀಕಿನ ಒಳಗಡೆ ಸಾಲದ ಮೊತ್ತವನ್ನು ಪಾವತಿ ಮಾಡ್ಬೇಕಾಗುತ್ತದೆ. ಸಾಲ ವಿಳಂಬ ಪಾವತಿಗೆ 750 ರೂಪಾಯಿ ದಂಡ ವಿಧಿಸಲು ಪೇಟಿಎಂಗೆ ಅವಕಾಶವಿದೆ. ಮತ್ತು ಸಾಲ ವಿತರಣೆ ಪ್ರಕ್ರಿಯೆಗೆ ಶೇಕಡಾ 3ರಷ್ಟು ಶುಲ್ಕ ವಿಧಿಸಲೂ ಪೇಟಿಎಂಗೆ ಅವಕಾಶವಿದೆ.