ತಿರುಪತಿ ಲಡ್ಡು (Tirupati laddu) ವಿವಾದ ದೇಶಾದ್ಯಂತ ಭಾರೀ ವಿವಾದವನ್ನೇ ಸೃಷ್ಟಿಸಿದೆ. ಇದರ ಜೊತೆಗೆ ಲಡ್ಡು ವಿವಾದ ರಾಜಕೀಯ ಟಾಕ್ ವಾರ್ ತಿರುವು ಪಡೆದಿದೆ. ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ (Pawan kalyan) ಮತ್ತು ನಟ ಪ್ರಕಾಶ್ ರಾಜ್ (Prakash raj) ನಡುವೆ ಸನಾತನ ಸಂಘರ್ಷ ಮತ್ತಷ್ಟು ಜೋರಾಗಿದೆ.

ಡಿಸಿಎಂ ಪವನ್ ಕಲ್ಯಾಣ್, ದೇವಾಯಲಗಳ ರಕ್ಷಣೆಗೆ ರಾಷ್ಟ್ರಮಟ್ಟದಲ್ಲಿ ಸನಾತನ ಧರ್ಮ ರಕ್ಷಣಾ ಮಂಡಳಿ ಸ್ಥಾಪನೆ ಅಗತ್ಯ ಎಂದಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ನಟ ಪ್ರಕಾಶ್ ರಾಜ್, ನಿಮ್ಮ ಲೋಕಲ್ ವಿಚಾರವನ್ನು (Loal isuues) ರಾಷ್ಟ್ರಮಟ್ಟದಲ್ಲಿ ದೊಡ್ಡದ್ಯಾಕೆ ಮಾಡ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.
ಇದಕ್ಕೆ ಪವನ್ ಕಲ್ಯಾಣ್ ತಿರುಗೇಟು ನೀಡಿದ್ದು, ಸನಾತನ ಧರ್ಮದ (Sanatan dharm) ವಿಚಾರದಲ್ಲಿ ಮಾತನಾಡುವಾಗ ನೂರು ಬಾರಿ ಯೋಚಿಸಿ ಎಂದು ವಾರ್ನಿಂಗ್ ಮಾಡಿದ್ದಾರೆ. ಇನ್ನು ತನ್ನ ಹೇಳಿಕೆಯನ್ನು ತಿರುಚಲಾಗಿದ್ದು, ಸೆಪ್ಟೆಂಬರ್ 30ರ ಬಳಿಕ ನಿಮ್ಮ ಎಲ್ಲ ಪ್ರಶ್ನೆಗೂ ಉತ್ತರ ಕೊಡ್ತೀನಿ ಎಂದಿದ್ದಾರೆ.