ಲೋಕಸಭಾ ಚುನಾವಣೆಯ ಫಲಿತಾಂಶದ (Parliment election results) ಬೆನ್ನಲ್ಲೇ, ರಿಯಲ್ ಸ್ಟಾರ್ ಉಪೇಂದ್ರ (Real star upendra) ಅವರ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ (Social media) ವೈರಲ್ ಆಗ್ತಿದೆ. ತೆಲುಗಿನ (Telugu) ಜನ ಪವನ್ ಕಲ್ಯಾಣ್‌ರನ್ನ (Pawan kalyan) ಗೆಲ್ಲಿಸಲು 14 ವರ್ಷ ಬೇಕಾಯಿತು, ಕನ್ನಡಿಗರಿಗೆ ಉಪೇಂದ್ರರನ್ನು (Upendra) ಗೆಲ್ಲಿಸಲು ಎಷ್ಟು ವರ್ಷ ಬೇಕು ಎಂಬ ಟ್ರೋಲ್ ಒಂದನ್ನ ಹಂಇಕೊಂಡಿರುವ ಉಪ್ಪಿ ಈ ಬಗ್ಗೆ ಮಾರ್ಮಿಕವಾಗಿ ಮತದಾರರನ್ನ ಕುಟುಕಿದ್ದಾರೆ.

ವಾಹ್ ಮೈ ಡಿಯರ್ ಪ್ರಜಾಪ್ರಭುಗಳೇ ವಾಹ್,ಉಪೇಂದ್ರ ಸೋಲು ಗೆಲವು ಬಗ್ಗೆ ತುಂಬಾ ಚಿಂತೆ ಮಾಡ್ತಿದೀರ !ಎಂತಾ ನಿಸ್ವಾರ್ಥ ! ಎಂತಾ ತ್ಯಾಗ ಮನೋಭಾವ ! ನಿಮ್ಮೆಲ್ಲರ ಪಾದಕ್ಕೆ ಅಡ್ ಬಿದ್ದೆ. ಡೋಂಟ್ ವರೀ ನಾನ್ ಗೆಲ್ವೇಕು ಅಂತ ಅನ್ನಿಸಿದಾಗ ಯಾವುದಾದರೂ ರಾಜಕೀಯ ಪಕ್ಷ ಸೇರಿ ನೀವ್ ಹೇಳ್ತಾಗೆಲ್ಲಾ ಮಾಡ್ತೀನಿ, ಗೆದ್ದೇ ಗೆಲ್ಲೀನಿ,ನೀವ್ ಗೆಲ್ಲೋದ್ ಯಾವಾಗ ಅಂತ ನೀವ್ ಯೋಚನೆ ಮಾಡ್ರಪ್ಪೋ ! ನೆಕ್ಟ್ ಎಲೆಕ್ಷನ್ ನಲ್ಲಿ ನನಗ್ ಕೆಲ್ಸಾ ಕೊಡ್ತೀರ ಅಂದ್ರೆ ನಿಡ್ತೀನಿ ಆಗ ನೀವ್ ಎಮೋಸನಲ್ ಪ್ರಚಾರ ಮಾಡ್ತೀ .. ಸಭೆ ಸಮಾರಂಬ ಎಲ್ಲಾ ಮಾಡ್ತೀ,ಕಷ್ಟ ಪಡ್ತೀ,ಆಮೇಲ್ ಐದು ವರ್ಸ ನೀವೇನ್ ಬೇಕಾದ್ರೂ ಮಾಡ್ಕಳಿ ನಾವ್ ಕೇಳಕ್ ಬರಲ್ಲ ಅಂದ್ರೆ ಉಸ್.. ಏನ್ ಬರೀಬೇಕೋ ಗೊತ್ತಾಗ್ತಿಲಿರಪ್ಪೋ.ಈ ದಡ್ ನನ್ ಮಗಂಗೇ ಯಾವೋನಾದ್ರ ಇನ್ ಮೇಲೆ ಬುದ್ದಿವಂತಾ ಅಂದ್ರೆ ಅಷ್ಟೇ ಸೆಂದಾಗಿರಕ್ಕಿಲ್ಲಾ ಎಂದು ಪೋಸ್ಟ್ ಮಾಡಿ ಮಾರ್ಮಿಕವಾಗಿ ಕುಟುಕಿದ್ದಾರೆ.