ಕೆಲವರ ಪ್ರಕಾರ ಸೆಕ್ಯುಲರಿಸಂ (Secularism) ಎಂದರೆ ಹಿಂದೂ ಧರ್ಮವನ್ನು ದೂಷಿಸುವುದು ಮತ್ತು ಇತರ ಧರ್ಮಗಳನ್ನು ಹೊಗಳುವುದಾ? ಅಂತ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ (Dem pawan kalyan) ಮತ್ತೊಮ್ಮೆ ಹಿಂದೂ ವಿರೋಧಗಳ ವಿರುದ್ಧ ಗುಡುಗಿದ್ದಾರೆ.

ತಿರುಪತಿಯಲ್ಲಿ (Tirupati) ನಡೆದ ವಾರಾಹಿ ಘೋಷಣೆ ಸಭೆಯಲ್ಲಿ ಮಾತನಾಡಿದ ಪವನ್ ಕಲ್ಯಾಣ್, ನಾನು ದಶಕಗಳಿಂದ ನೋಡುತ್ತಿದ್ದೇನೆ. ಸನಾತನ ಧರ್ಮವನ್ನು ಅನುಸರಿಸುವವರ ವಿರುದ್ಧ ಕಾನೂನು ಸಹ ನಿರ್ದಯವಾಗಿ ಕೆಲಸ ಮಾಡುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಸಾಂಪ್ರದಾಯಿಕತೆ ಒಂದು ವೈರಸ್ (Virus) ಎಂದು ಯುವ ನಾಯಕರೊಬ್ಬರು ಹೇಳಿದ್ದಾರೆ. ಸನಾತನ ಧರ್ಮ ಮತ್ತು ಹಿಂದೂ ದೇವತೆಗಳ ಮೇಲೆ ಇನ್ನೂ ದಾಳಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.