ನಟ ದರ್ಶನ್ (Actor darshan) ಆ್ಯಂಡ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ (Renukaswamy) ಹತ್ಯೆಗೆ ಕಾರಣವಾದ ಆ ಮೆಸೇಜ್ ಅನ್ನೋದು ಕೊನೆಗೂ ರಿವೀಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ (Social media) ಫೇಕ್ ಐಡಿ ಮೂಲಕ ರೇಣುಕಾಸ್ವಾಮಿ, ಪವಿತ್ರಾಗೌಡಗೆ (Pavitra gowda)ಮರ್ಮಾಂಗದ ಫೋಟೋ ಕಳಿಸಿದ್ದಂತೆ.

ಕಳೆದ ಶುಕ್ರವಾರ ರೇಣುಕಾಸ್ವಾಮಿ, ಮರ್ಮಾಂಗದ ಫೋಟೋ ಕಳಿಸಿ ದರ್ಶನ್‌ಗಿಂತ ನಾನೇನು ಕಡಿಮೆ ಬಾ ಅಂತ ಕರೆದಿದ್ದಂತೆ. ರೇಣುಕಾಸ್ವಾಮಿಯ ಈ ವಿಕೃತಿಯನ್ನ ಪವಿತ್ರಗೌಡ ಪವನ್‌ಗೆ ಹೇಳಿದ್ದಳು. ಯಾವುದೇ ಕಾರಣಕ್ಕೂ ದರ್ಶನ್ ಗೆ ಹೇಳಬೇಡ, ಅವನು ಏನಾದ್ರು ಮಾಡಿಬಿಡ್ತಾನೆ ಎಂದಿದ್ದಳಂತೆ.
ಆದ್ರೆ ದರ್ಶನ್‌ಗೆ ವಿಷಯ ತಿಳಿದು, ಬಳಿಕ ರೇಣುಕಾಸ್ವಾಮಿಯನ್ನ ಕಿಟ್ರ್ಯಾಪ್ ಮಾಡಲು ಪ್ಲಾನ್ ಮಾಡಿದ್ದಾರೆ. ನಂತರ ಆತನಿಗೆ ಚೆನ್ನಾಗಿ ಥಳಿಸಿದ್ದಾರೆ ಆ ಸಂದರ್ಭದಲ್ಲಿ ಮರ್ಮಾಂಗಕ್ಕೆ ಗಂಭೀರ ಪೆಟ್ಟು ಬಿದ್ದು ರೇಣುಕಾ ಸ್ವಾಮಿ ಸಾವನ್ನಪ್ಪಿದ್ದಾನೆ.