2017 ರಲ್ಲಿ ನವೆಂಬರ್ ನಲ್ಲಿ ಸೌಂದರ್ಯ ಜಗದೀಶ್ (Soundarya Jagadeesh) ರಿಂದ ದರ್ಶನ್ ಆಪ್ತ ಗೆಳತಿ, ರೇಣುಕಾಸ್ವಾಮಿ ಕೊಲೆ ಕೇಸ್ (Renuka swamy murder case) ನ A1 ಪವಿತ್ರ ಗೌಡಗೆ ಕೋಟಿ ಕೋಟಿ ಹಣ ವರ್ಗಾವಣೆಯಾಗಿರೋದು ಬೆಳಕಿಗೆ ಬಂದಿದೆ. ನಿರ್ಮಾಪಕ ಸೌದರ್ಯ ಜಗದೀಶ್, ದರ್ಶನ್ ಆಪ್ತರಾಗಿದ್ದು,ಕೆಲ ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮೊದಲಿಗೆ ಒಂದು ಬಾರಿ ಒಂದು ಕೋಟಿ ಹಣ (1 crore) ವರ್ಗಾವಣೆಯಾಗಿದ್ದು, ಮತ್ತು 23/01/2018 ರಲ್ಲಿ ಮತ್ತೊಂದು ಕೋಟಿ ಹಣ ವರ್ಗಾವಣೆಯಾಗಿದೆ.ಆ ಮೂಲಕ ಇದುವರೆಗೆ ಎರಡು ಕೋಟಿ ಹಣ ನೀಡಿಲಾಗಿದೆ.
ಪವಿತ್ರ ಗೌಡ (Pavitra gowda) ಮನೆ ಖರೀದಿ ಮಾಡುವ ಸಮಯದಲ್ಲಿ ಹಣ ಪಡೆದಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದ್ದು, ಆದ್ರೆ ಈ ಸೌಂದರ್ಯ ಜಗದೀಶ್ ಯಾಗೆ ಪವಿತ್ರಾಳಿಗೆ ಹಣ ಕೊಟ್ಟಿದ್ದಾರೆ ಅನ್ನೊದು ಕುತೂಹಲಕ್ಕೆ ಕಾರಣವಾಗಿದೆ.

ಈ ಬಗ್ಗೆ ಈ ಹಿಂದೆ ಸೌಂದರ್ಯ ಜಗದೀಶ್ ಪತ್ನಿ ದೂರು ಸಹ ನೀಡಿದ್ದರು. ಹಣ ಯಾಕೆ ಕೊಟ್ಟಿದ್ದಾರೆ ಎಂದು ಪರಿಶೀಲನೆ ನಡೆಸಲು ಮನವಿ ಮಾಡಿದ್ದರೂ, ಒಂದು ಹಂತದ ತನಿಖೆ ನಡೆದಿತ್ತು. ಈ ವೇಳೆ ಸೌಂದರ್ಯ ಜಗದೀಶ್ ಪಾಟ್ನರ್ ಸುರೇಶ್ ತನಿಖಾ ತಂಡಕ್ಕೆ ನೀಡಿದ್ದಾರೆ. ಸದ್ಯ ಮಹಾಲಕ್ಷ್ಮಿ ಲೇಔಟ್ ಪೊಲೀಸರಿಂದ ತನಿಖೆ ನಡೆಸುತ್ತಿದ್ದು, ಈ ಹಣ ಯಾವ ಕಾರಣಕ್ಕೆ ಕೊಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.











