ಸುದೀರ್ಘ 9 ಗಂಟೆ ಮೆದುಳು ಶಸ್ತ್ರಚಿಕಿತ್ಸೆ ವೇಳೆ ರೋಗಿ ಸೆಕ್ಸೋಫೋನ್ ನುಡಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
35 ವರ್ಷದ ಸಂಗೀತಗಾರ ಜಿಜೆಡ್ ಎಂದೇ ಗುರುತಿಸಿಕೊಂಡಿದ್ದು, ಇಟಲಿಯ ರೋಮ್ ನಲ್ಲಿರುವ ಪೈಡೆಯಿಯಾ ಅಂತಾರಾಷ್ಟ್ರೀಯ ಆಸ್ಪತ್ರೆಯಲ್ಲಿ ಅತ್ಯಂತ ಕಠಿಣವಾದ ಮೆದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಸಂಗೀತಕಾರ ಡಿಜೆಡ್ 9 ಗಂಟೆಗಳ ಅಪರೇಷನ್ ವೇಳೆ 1970ರ ಲವ್ ಸ್ಟೋರಿ ಸಿನಿಮಾದ ಹಾಡು ಹಾಗೂ ಇಟಲಿಯ ರಾಷ್ಟ್ರಗೀತೆಯನ್ನು ನುಡಿಸುತ್ತಿದ್ದರು.
9 ಗಂಟೆಗಳ ಕಾಲ ಸತತವಾಗಿ ನಡೆದ ಸುದೀರ್ಘ ಶಸ್ತ್ರಚಿಕಿತ್ಸೆ ವೇಳೆ ಜಿಜೆಡ್ ಸ್ಯಾಕ್ಸೊಫೋನ್ ನುಡಿಸಿದ್ದಾರೆ. ಶಸ್ತ್ರಚಿಕಿತ್ಸೆ ವೇಳೆ ಮೆದುಳಿನಲ್ಲಿದ್ದ ಗಡ್ಡೆ ತೆಗೆಯಲಾಯಿತು ಹಾಗೂ ಅಸಮರ್ಪಕವಾಗಿ ಕೆಲಸ ಮಾಡುತ್ತಿದ್ದ ನರಗಳಿಗೆ ಚಿಕಿತ್ಸೆ ನೀಡಲಾಯಿತು. ಶಸ್ತ್ರಚಿಕಿತ್ಸೆ ಮುಗಿದ ನಂತರ ಸಂಗೀತಗಾರ ಡಿಸ್ಚಾರ್ಜ್ ಆಗಿದ್ದಾರೆ.
ಅತ್ಯಂತ ಕಠಿಣ ಮೆದುಳು ಶಸ್ತ್ರಚಿಕಿತ್ಸೆ ಆಗಿದ್ದರಿಂದ ವೈದ್ಯರು ರೋಗಿ ಎಚ್ಚರದಲ್ಲಿ ಇರಬೇಕಿತ್ತು. ಈ ಮೂಲಕ ಅವರು ಮೆದುಳಿನ ನರಗಳ ಶಸ್ತ್ರಚಿಕಿತ್ಸೆ ಮುಂದುವರಿಸಲು ಗಮನ ಹರಿಸಲು ಸಹಕಾರಿಯಾಗುತ್ತಿತ್ತು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ವ್ಯಕ್ತಿ ನಡೆಯುವಾಗ, ಸಂಗೀತ ನುಡಿಸುವಾಗ, ಕೇಳುವಾಗ ನೆನಪು ಮಾಡಿಕೊಳ್ಳುವುದು ಹೀಗೆ ಯಾವುದಾದರೂ ಚಟುವಟಿಕೆ ಮಾಡುತ್ತಿದ್ದರೆ ಮೆದುಳು ಸಕ್ರಿಯವಾಗಿರುತ್ತದೆ. ಇದರಿಂದ ಅದರ ಚಲನೆ ಗುರುತಿಸಬಹುದಾಗಿದೆ. ಪ್ರತಿಯೊಬ್ಬ ವ್ಯಕ್ತಿ ಹಾಗೂ ಮೆದುಳಿನ ಕೆಲಸ ಭಿನ್ನವಾಗಿರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಸುಮಾರು 10 ವೈದ್ಯರ ತಂಡ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮಾಡಿದ್ದಾರೆ.