ಲೋಕಸಭಾ ಚುನಾವಣೆ ಬಳಿಕ ಬಿಜೆಪಿ- ಜೆಡಿಎಸ್ (Bjp-Jds) ಮೊದಲ ಸಮನ್ವಯ ಸಭೆ ನಡೆಸಿದೆ. ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಹಾಗೂ ಮಾಜಿ ಸಚಿವ ಜಿಟಿ ದೇವೇಗೌಡ (GT Devegowda) ನೇತೃತ್ವದಲ್ಲಿ ಈ ಸಭೆ ಜರುಗಿದೆ.
ಈ ಸಭೆಯಲ್ಲಿ ಮೈತ್ರಿ ಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸಿಸುವ ಬಗ್ಗೆ ಚರ್ಚೆ ನಡೆದಿದೆ.ಇನ್ನೂ ಈ ಸಭೆಯಲ್ಲಿ ಮಾಜಿ ಸಚಿವ ಅಶ್ವಥ್ ನಾರಾಯಣ(Ashwath Narayan), ನಿಖಿಲ್ ಕುಮಾರಸ್ವಾಮಿ(Nikhil Kumar Swamy),ಪರಿಷತ್ ಅಭ್ಯರ್ಥಿಗಳು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಹಲವು ಬಿಜೆಪಿ(BJP) ಜೆಡಿಎಸ್(JDS) ನಾಯಕರು ಭಾಗಿಯಾಗಿದ್ರು.
ಇನ್ನೂ ಈ ಸಭೆ ಬಗ್ಗೆ ವಿಜಯೇಂದ್ರ ಮಾಜಿ ಸಚಿವ ಜಿಟಿ ದೇವೇಗೌಡ ಪ್ರತಿಕ್ರಿಯಿದ್ದು. ಮೈತ್ರಿಯಲ್ಲಿ ಯಾವುದೇ ತೊಡಕಿಲ್ಲ, ಒಗ್ಗಟ್ಟಾಗಿ ಬಿಜೆಪಿ ಮತ್ತು ಜೆಡಿಎಸ್ ಈ ಚುನಾವಣೆಯನ್ನು(Election) ಎದುರಿಸಲಿದ್ದು, ಯಾವುದೇ ಸಮನ್ವಯತೆಯ ಕೊತರೆಯಿಲ್ಲ ಎಂದು ಹೇಳಿದ್ರು.