ಆನ್ ಲೈನ್ ಶಿಕ್ಷಣದ ಸಮಯದಲ್ಲಿ ಮಕ್ಕಳು ಹೆಚ್ಚಾಗಿ ಆನ್ ಲೈನ್ ಶಿಕ್ಷಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಪೋಷಕರು ಈ ಕುರಿತು ಗಮನ ಹರಿಸಬೇಕು ಎಂದು ಎಸಿಟಿ ಎಜುಕೇಷನಲ್ ರಿಸರ್ಚ್ ಔಟ್ಕಮ್ಸ್ (ಎಇಆರ್ಒ) ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಕಳೆದ ಕೆಲವು ತಿಂಗಳುಗಳಿಂದ ಶಾಲಾ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳೆಲ್ಲವೂ ನಡೆಯುತ್ತಿರುವುದು ಮನೆಯ ನಾಲ್ಕುಗೋಡೆಗಳೊಳಗಷ್ಟೇ ಇದ್ದಿತ್ತು.ಅಷ್ಟರಮಟ್ಟಿಗೆ ಕರೋನಾ ಹಾವಳಿಯ ಕಾಟವಿತ್ತು. ಬಳಿಕ ಅ. 25 ಕ್ಕೆ ಶಾಲೆಗಳು ಓಪನ್ ಆಗಿ, ಮಕ್ಕಳು ಮನೆಯೊಳಗಿಂದ ವಾಪಾಸು ಭೌತಿಕ ಶಿಕ್ಷಣದತ್ತ ಮರಳಿದ್ದಾರೆ.
ಕೆಲವು ಗ್ರಾಮೀಣ ಪ್ರದೇಶದ ಮಕ್ಕಳಿಗೆ ನೆಟ್ ವರ್ಕ್ ಸಮಸ್ಯೆಗಳಿದ್ದು, ಅಂತಹ ಕಡೆಗಳಲ್ಲಿ ಆನ್ ಲೈನ್ ತರಗತಿಗಳನ್ನು ಕೇಳಲೂ ಮಕ್ಕಳು ಪರದಾಟ ನಡೆಸುತ್ತಿದ್ದ ದಿನಗಳಿದ್ದವು, ಆದರೆ ರಾಜ್ಯದಲ್ಲ ಆನ್ ಲೈನ್ ಶಿಕ್ಷಣ ಲಭ್ಯ ಇರುವ ಶೇ. 80% ರಷ್ಟು ಮಕ್ಕಳು ಆನ್ ಲೈನ್ ಶಿಕ್ಷಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆಯ ಪ್ರಕಾರ ಮಕ್ಕಳು ಗ್ಯಾಜೆಟ್ ಚಟಕ್ಕೆ ಕಾರಣವಾಗಿರಬಹುದು ಎಂದು ತಿಳಿದುಬಂದಿದೆ.
ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಅವರ ಮಾರ್ಗದರ್ಶನದಲ್ಲಿ ನಡೆಸಿದ ಅಧ್ಯಯನವು, ಹೆಚ್ಚಿನ ಪೋಷಕರು ತಮ್ಮ ಮಕ್ಕಳೊಂದಿಗೆ ಕಲಿಕೆಯ ಸಂದರ್ಭದಲ್ಲಿ ತೊಡಗಿಸಿಕೊಳ್ಳಬೇಕು. ಶೇ. 33ರಷ್ಟು ಮಕ್ಕಳು ಉದ್ರೇಕಗೊಂಡು ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಕೇವಲ 13 ಶೇ. ಮಾತ್ರ ಪೋಷಕರು ತಮ್ಮಮಕ್ಕಳ ಜೊತೆ ಶಿಕ್ಷಕರ ಸಂಪರ್ಕದ ಜೊತೆ ಕಲಿಕೆಯನ್ನು ಬೆಂಬಲಿಸುತ್ತಾರೆ ಎಂದು ತಿಳಿದು ಬಂದಿದೆ.
ಕರೋನಾ ಸಾಂಕ್ರಾಮಿಕ ರೋಗವು ಮಕ್ಕಳ ಮತ್ತು ಪೋಷಕರ ನಡುವಿನ ಬಾಂಧವ್ಯವನ್ನು ಹೆಚ್ಚಿಸಿತು. ದೂರದಲ್ಲಿ ಓದುತ್ತಿದ್ದ ಮಕ್ಕಳು ಆನ್ ಲೈನ್ ಶಿಕ್ಷದಿಂದ ಪೋಷಕರ ಮಡಿಲು ಸೇರಿದ್ದರು. ಇದರಿಂದ ಶೇ. 15 ರಷ್ಟು ಪೋಷಕರು ತಮ್ಮ ಮಕ್ಕಳ ಕಾಳಜಿವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಆನ್ ಲೈನ್ ಕಲಿಕೆಯಿಂದ ಮಕ್ಕಳ ಅರಿವು ಶೇ. 40 ರಷ್ಟು ಹೆಚ್ಚಳ
ಆನ್ಲೈನ್ ಕಲಿಕೆಯಲ್ಲಿ ಆಡಿಯೋ ಮತ್ತು ದೃಶ್ಯ ಮಾಧ್ಯಮಗಳಿಂದ ಮಕ್ಕಳ ಅರಿವಿನ ಕೌಶಲ್ಯಗಳಲ್ಲಿ ಶೇ. 40 ರಷ್ಟು ಸುಧಾರಣೆಯಾಗಿದೆ ಎಂದು ಸಂಶೋಧನೆಗಳು ತೋರಿಸಿವೆ. ಹಾಗೆಯೇ ಕೆಲವು ಗ್ರಾಮೀಣ ಭಾಗಗಳಲ್ಲಿ ಕಲಿಕೆಯ ಸಂದರ್ಭದಲ್ಲಿ ನಿರಂತರವಾದ ವಿದ್ಯುತ್ ಉಪಯೋಗವಾಗುತ್ತಿತ್ತು, ಹಾಗೂ ಹೆಚ್ಚುವರಿ ಇಂಟರ್ ನೆಟ್ ಬಳಕೆಯಾಗುತ್ತಿತ್ತು ಎಂದು ಅನೇಕ ಪೋಷಕರು ಕಳವಳದಲ್ಲಿದ್ದು, ರಾಜ್ಯದ ನಾಲ್ಕು ಶೈಕ್ಷಣಿಕ ವಿಭಾಗಗಳಾದ ಬೆಂಗಳೂರು, ಬೆಳಗಾವಿ, ಕಲಬುರಗಿ ಮತ್ತು ಮೈಸೂರುಗಳಿಂದ ಆನ್ ಲೈನ್ ಸಂಶೋಧನೆಯು 2,000 ಜನರ ರೆಸ್ಪಾನ್ಸ್ ಗಳನ್ನು ಅಂಕಿಅಂಶಗಳಲ್ಲಿ ಪಡೆದುಕೊಂಡಿದೆ.

ಈ ಸಂಶೋಧನೆಯು ಆನ್ಲೈನ್ ಶಿಕ್ಷಣದ ವಿವಿಧ ಅಂಶಗಳನ್ನು ಅನ್ವೇಷಿಸುವ ಗುರಿಯನ್ನು ಹೊಂದಿದ್ದು, ಇದರಲ್ಲಿ ಪೋಷಕರು, 1 ರಿಂದ 5 ನೇ ತರಗತಿಯಲ್ಲಿ ಓದುತ್ತಿರುವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಕೋವಿಡ್ ಸಮಯದ ಸಂದರ್ಭದಲ್ಲಿ ಯಾವ ರೀತಿಯಾಗಿ ಒಗ್ಗೂಡುವಿಕೆ ಬೇಕಾಗುತ್ತದೆ ಎಂದು ತಿಳಿಸುತ್ತದೆ.