ಮಂಗಳೂರಲ್ಲಿ ನಡೆದಿದ್ದ ಕೊಲೆ ಕೇಸ್‌ನಲ್ಲಿ ಈಗಾಗಲೇ 8 ಜನರನ್ನ ಬಂಧಿಸಲಾಗಿದೆ. ಅನೇಕ ಆಯಾಮಗಳಲ್ಲಿ ತನಿಖೆ ನಡೀತಿದೆ. ಈ ಕುರಿತಂತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಸುಹಾಸ್ ಶೆಟ್ಟಿ ಕೊಲೆಯಲ್ಲಿ ವಿದೇಶಿ ಲಿಂಕ್ ಇರೋ ವಿಚಾರದ ಬಗ್ಗೆ ತನಿಖೆ ಮಾಡಲಾಗ್ತಿದೆ. ತನಿಖೆ ನಡೆಯಲಿ ಪೂರ್ಣ ಮಾಹಿತಿ ಸಿಗಲಿದೆ ಎಂದಿದ್ದಾರೆ. ಯಾರು ಸುಪಾರಿ ಕೊಟ್ಟಿದ್ದಾರೆ..? ಎಷ್ಟು ಸುಪಾರಿ ಕೊಟ್ಟಿದ್ದಾರೆ..? ಅನ್ನೋದರ ಬಗ್ಗೆ ತನಿಖೆ ನಡೆಯಲಿದೆ ಅಂತ ಹೇಳಿದ್ರು. ಬೆಂಗಳೂರಿನಲ್ಲಿ ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ವಿದೇಶಿ ಲಿಂಕ್ ಆರೋಪ ವಿಚಾರವಾಗಿ ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡ್ತಿದ್ದಾರೆ. ಅದೆಲ್ಲ ತನಿಖೆಯಿಂದಲೇ ಗೊತ್ತಾಗಬೇಕು. ಅದರ ಬಗ್ಗೆ ತನಿಖೆ ಮುಗಿದ ಮೇಲೆ ಸಂಪೂರ್ಣ ಮಾಹಿತಿ ಸಿಗುತ್ತದೆ. ನಾವು ಊಹೆ ಮಾಡಿ ಮಾತಾಡಲು ಆಗಲ್ಲ ಎಂದಿದ್ದಾರೆ.

ಇನ್ನು ಸೋಷಿಯಲ್ ಮೀಡಿಯಾದಲ್ಲಿ ಬೆದರಿಕೆ ಪೋಸ್ಟ್‌ಗಳನ್ನ ಹಾಕ್ತಿರೋ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ಬೆದರಿಕೆ ಪೋಸ್ಟ್‌ಗಳ ವಿಚಾರವಾಗಿ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಕ್ರಮ ಕೈಗೊಳ್ಳುವಂತೆ ನಾನು ಈಗಾಗಲೇ ಸೂಚನೆ ನೀಡಿದ್ದೇನೆ. ಇವತ್ತು ಬೆಳಗ್ಗೆಯೂ ADGPಗೆ ನಾನು ಸೂಚನೆ ನೀಡಿದ್ದೇನೆ ಅಂತ ಹೇಳಿದ್ದಾರೆ. ಮಂಗಳೂರಿನಲ್ಲೂ ಅಧಿಕಾರಿಗಳಿಗೆ ಹೇಳಿ ಬಂದಿದ್ದೆ, ಇಂದೂ ಬೆಳಗ್ಗೆಯೂ ನಮ್ಮ ಎಡಿಜಿಪಿಗೆ ಸೂಚನೆ ಕೊಟ್ಟಿದ್ದೇನೆ. ಯಾರು ಬೆದರಿಕೆ ಹಾಕಿದ್ದಾರೆ, ಅವರ ಮೇಲೆ ಕೂಡಲೇ ಕ್ರಮ ಕೈಗೊಳ್ಳಲು ಹೇಳಿದ್ದೇನೆ ಎಂದಿದ್ದಾರೆ.

ಸುಹಾಸ್ ಶೆಟ್ಟಿ ಹೆಸರಿನಲ್ಲಿ ರೌಡಿಶೀಟರ್ ಎನ್ನುವ ವಿಚಾರಕ್ಕೆ ಬಿಜೆಪಿ ಆಕ್ಷೇಪ ಎತ್ತಿದೆ. ಈ ಬಗ್ಗೆ ಮಾತನಾಡಿರುವ ಪರಮೇಶ್ವರ್, ರೌಡಿಶೀಟರ್ ಅನ್ನೋ ಕೆಟಗರಿಯಲ್ಲಿ ಪೊಲೀಸರು ಕೇಸ್ ಮಾಡಿಸಿದ್ರೆ, ಅವರನ್ನ ಹಾಗೆ ಕರೆಯಬಹುದಲ್ವಾ..? ರೌಡಿಶೀಟರ್ ಸೆಕ್ಷನ್ ಇದ್ರೆ ಯಾರನ್ನು ಬೇಕಾದರೂ ಕರೆಯಬಹುದು, ಕಾನೂನು ಹಾಗೆ ಕರೆಯುತ್ತೆ ಅಂದ್ಮೇಲೆ ಇನ್ನೇನು ಅಂತ ಪ್ರಶ್ನೆ ಮಾಡಿದ್ದಾರೆ












