ಮಂಡ್ಯದ ಕೆರಗೋಡು (Keregodu) ಗ್ರಾಮದ ಗೌರಿಶಂಕರ ಸೇವಾ ಟ್ರಸ್ಟ್. ರಿಜಿಸ್ಟರೆಷನ್ ನಂಬರ್ 024 /98-99, ಇದು ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಟ್ರಸ್ಟ್ ಇದು. ಕೆರಗೋಡು ಗ್ರಾಮದ ರಂಗಮಂದಿರ ಆವರಣದಲ್ಲಿ ಧ್ವಜಸ್ತಂಬ ನಿರ್ಮಾಣ ಮಾಡುವ. ಹಾಗೂ ತ್ರಿವರ್ಣ ಧ್ವಜ ಹಾರಿಸುವ ಹಾಗೂ ಕನ್ನಡ ಬಾವುಟ ಹಾರಿಸಲು ಅನುಮತಿ ಪಡೆದಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (Gparameshwar) ಹೇಳಿದರು.

ಪಂಚಾಯತಿರವರು (Grama panchayat) ಈ ಷರತ್ತಿನ ಮೇಲೆ ಅನುಮತಿ ನೀಡಿದ್ದಾರೆ. ಯಾವುದೇ ಧಾರ್ಮಿಕ ರಾಜಕೀಯ ಬಾವುಟ ಹಾರಿಸಲ್ಲ ಎಂದು ಷರತ್ತು ನೀಡಿ ಅನುಮತಿ ನೀಡಲಾಯಿತು. ಕೆರಗೋಡು ಪಿಡಿಓ ಹಾಗೂ ಅಧ್ಯಕ್ಷರು ಅನುಮತಿ ನೀಡಿದ್ರು. ಆದರೆ ಭಗವಾ ಧ್ವಜ ಹಾರಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡಿದ್ರೆ ಏನು ಮಾಡಬೇಕು. ಹೀಗಾಗಿ ಲಾಠಿ ಚಾರ್ಜ್ ಮಾಡಿದ್ದಾರೆ. ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಆಗಲಿದೆ. ನಾನು ಅಗತ್ಯವಿದ್ದಲ್ಲಿ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

ಮಂಡ್ಯ ಜಿಲ್ಲಾಧಿಕಾರಿ ಕಾನೂನು ಪಾಲನೆ ಮಾಡಿದ್ದಾರೆ. ಅಮಾನತು ಅವಶ್ಯಕತೆ ಇಲ್ಲ. ಲೋಕಸಭಾ ಚುನಾವಣೆ ಸಮೀಪ ಹಿನ್ನೆಲೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇದು ನಕಲಿ ಪೇಪರ್ ಅಲ್ಲ, ಇದು ಜುಡಿಷಲ್ ಪೇಪರ್ . ಆದೇಶದ ಕಾಪಿಗಳನ್ನ ತೋರಿಸಿ ಮಾಜಿ ಸಿಎಂ ಕುಮಾರಸ್ವಾಮಿಗೆ ಪರಮೇಶ್ವರ್ ತಿರುಗೇಟು ಕೊಟ್ಟಿದ್ದಾರೆ.