ಬೆಳಗಾವಿ: ಕರ್ನಾಟಕದಲ್ಲಿ ಪ್ಯಾಲೆಸ್ತೀನ್ (Palestine) ದೇಶದ ಪರ ಘೋಷಣೆ ಮತ್ತು ಧ್ವಜ ಹಾರಾಟ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಚಿಕ್ಕಮಗಳೂರು (Chikkamagaluru), ಕೋಲಾರ (Kolar) ಬಳಿಕ ಇದೀಗ ಬೆಳಗಾವಿ (Belagavi) ನಗರದ ದರ್ಬಾರ್ ಗಲ್ಲಿಯಲ್ಲಿ ಕಿಡಿಗೇಡಿಗಳು ಪ್ಯಾಲೆಸ್ತೀನ್ ಧ್ವಜದ ರೀತಿ ಹೋಲುವ ಶಾಮಿಯಾನ ಹಾಕಿದ್ದಾರೆ.
ಗಣೇಶೋತ್ಸವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಈದ್ ಮಿಲಾದ್ ಮೆರವಣಿಗೆಯನ್ನು ನಾಳೆ (ಸೆಪ್ಟೆಂಬರ್ 22ಕ್ಕೆ) ಮುಂದೂಡಲಾಗಿದೆ. ಈದ್ ಮಿಲಾದ್ ಮೆರವಣಿಗೆ ಸಾಗುವ ದರ್ಬಾರ್ ಗಲ್ಲಿಯ 200 ಮೀಟರ್ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜದ ರೀತಿ ಹೋಲುವ ಶಾಮಿಯಾನ ಹಾಕಲಾಗಿದೆ. ಇದನ್ನು ಕಂಡ ಮಾರ್ಕೆಟ್ ಠಾಣೆ ಪೊಲೀಸರು ಪೊಲೀಸರು ಪ್ಯಾಲೆಸ್ತೀನ್ ಧ್ವಜದ ರೀತಿ ಹೋಲುವ ಶಾಮಿಯಾನ ತೆರವುಗೊಳಿಸಿದ್ದಾರೆ. ಪ್ಯಾಲೆಸ್ತೀನ್ ಧ್ವಜದ ರೀತಿ ಹೋಲುವ ಶಾಮಿಯಾನ ಕಟ್ಟಿದವರ ಬಗ್ಗೆ ಮಾರ್ಕೆಟ್ ಠಾಣೆ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.