ಎಐಎಡಿಎಂಕೆ ಪಕ್ಷದಿಂದ ಏಕೈಕ ಸಂಸದ ಒ.ಪಿ.ರವೀಂದ್ರನಾಥ್ನನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿ ಆದೇಶ ಹೊರಡಿಸಲಾಗಿದೆ.
ಪಕ್ಷದ ಉಚ್ಚಾಟಿತ ಶಾಸಕ ಒ.ಪನ್ನೀರಸೆಲ್ವಂ ಪುತ್ರನಾದ ರವೀಂದ್ರನಾಥ್ ಪಕ್ಷದ ಏಕೈಕ ಸಂಸದನಾಗಿದ್ದರು. ಪ್ರಸ್ತುತ ಅವರು ತೇಣಿ ಕ್ಷೇತ್ರವನ್ನ ಪ್ರತಿನಿಧಿಸುತ್ತಿದ್ದರು.

ಇದರ ಜೊತೆಜೊತೆಗೆ ಪನ್ನೀರಸೆಲ್ವಂ ಬೆಂಬಲಿಸಿದ ಕಾರಣಕ್ಕಾಗಿ 16ಕ್ಕು ಹೆಚ್ಚು ಮುಖಂಡರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಎಐಎಡಿಎಂಕೆ ಜನರಲ್ ಕೌನ್ಸಿಲ್ ಸೋಮವಾರ ಪಕ್ಷದ ಪ್ರಧಾನ ಕರ್ಯದರ್ಶಿಯಾಗಿ ನೇಮಿಸಿ ಆದೇಶ ಹೊರಡಿಸಿತ್ತು.
ಪಳನಿಸ್ವಾಮಿ ನೇಮಕ ಬೆನ್ನಲ್ಲೇ ಅವರ ಪ್ರತಿಸ್ಪರ್ಧಿ ಮಾಜಿ ಮುಖ್ಯಮಂತ್ರಿ ಓ.ಪನ್ನೀರಸೆಲ್ವಂರನ್ನು ಪಕ್ಷದ ಖಜಾಂಜಿ ಹುದ್ದೆಯಿಂದ ಹಾಗು ಪ್ರಾಥಮಿಕ ಸದಸ್ಯತ್ವದಿಂದ ುಚ್ಚಾಟಿಸಲಾಗಿತ್ತು.