ಪಾಕಿಸ್ತಾನ (pakistan) ತನ್ನ ಕೈಗಳಿಗೆ ಬಳೆಗಳನ್ನು ತೊಟ್ಟಿಲ್ಲ ಅಂದ್ರೆ ತೊಂದ್ರೆ ಇಲ್ಲ, ನಾವು ಅವರ ಕೈಗಳಿಗೆ ಬಳೆ ತೊಡಿಸುತ್ತೇವೆ. ಅವರಿಗೆ ಈಗ ಗೋಧಿಗೂ ಗತಿಯಿಲ್ಲ, ವಿದ್ಯುತ್ ಇಲ್ಲವೇ ಇಲ್ಲ. ಆದ್ರೆ ಪಾಪ ಅವರಿಗೆ ಬಳೆಗಳ ಕೊರತೆಯಿದೆ ಎಂದು ನನಗೆ ತಿಳಿಯಿತು ಎಂದು ಬಿಹಾರದ (bihar) ಮುಜಾಫರ್‌ಪುರದಲ್ಲಿ ಮಾಡಿದ ಭಾಷಣದಲ್ಲಿ ಮೋದಿ (Modi) ಅಬ್ಬರಿಸಿದ್ದಾರೆ. ಆ ಮೂಲಕ ಪರೋಕ್ಷವಾಗಿ ಫಾರೂಕ್ ಅಬ್ದುಲ್ಲಾ (faruk abdulla) ಮಣಿ ಶಂಕರ್ ಅಯ್ಯರ್ (mani shankar alyar) ಹೆಸರನ್ನು ಹೇಳದೇ ಟಾಂಗ್ ಕೊಟ್ಟಿದ್ದಾರೆ.
ಅಷ್ಟೇ ಅಲ್ಲ ಪಾಕಿಸ್ತಾನ ತನ್ನ ಬಾಂಬ್‌ಗಳನ್ನು (Bomb) ಮಾರಾಟ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಅವುಗಳ ಕಳಪೆ ಗುಣಮಟ್ಟದ ಕಾರಣ ಅದನ್ನು ಖರೀದಿಸಲು ಯಾರು ಮುಂದಾಗುತ್ತಿಲ್ಲ ಎಂದು ಪಾಕಿಸ್ತಾನದ ಬಾಂಬುಗಳನ್ನ ಗೇಲಿ ಮಾಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (POK) ಹಿಂಪಡೆಯುತ್ತೇವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath singh) ಪ್ರತಿಜ್ಞೆ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ನ್ಯಾಷನಲ್ ಕಾನ್ಸರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ನೆರೆಯ ದೇಶ, ಅಂದ್ರೆ ಪಾಕಿಸ್ತಾನ ಬಳೆ ತೊಟ್ಟುಕೊಂಡಿಲ್ಲ, ಭಾರತಕ್ಕೆ (India) ಹಾನಿ ಮಾಡುವ ಪರಮಾಣು ಬಾಂಬ್‌ಗಳನ್ನು ಹೊಂದಿದೆ. ಜಾಗರೂಕರಾಗಿರಿ ಎಂದು ಹೇಳಿದ್ದರು.
ಈ ಮಧ್ಯೆ ಮಣಿಶಂಕರ್ ಅಯ್ಯರ್ ಅವರ ಹಳೆಯ ವಿಡಿಯೊ ಒಂದು ಕಳೆದ ವಾರ ವೈರಲ್ (Video viral) ಆಗಿತ್ತು, ಇದರಲ್ಲಿ ಭಾರತ ಪಾಕಿಸ್ತಾನವನ್ನು ಗೌರವಿಸಬೇಕು, ಅವರ ಬಳಿ ಪರಮಾಣು ಬಾಂಬ್ (Atom bomb) ಇದೆ ಎಂದು ಹೇಳಿದ್ದರು. ಈ ಎಲ್ಲಾ ಹೇಳಿಕೆಗಳಿಗೆ ಒಮ್ಮೊಟ್ಟಿಗೆ ಟಾಂಗ್ ಕೊಟ್ಟರೋ ನಮೋ (NAMO) ಪಾಕಿಸ್ತಾನದ ಬಾಂಬ್‌ಗಳಿಗೆ ಹೆದರುವ ಅಗತ್ಯವಿಲ್ಲ, ಅವರ ಕೈಗೆ ನಾವೇ ಬಳೆ ತೊಡಿಸಲಿದ್ದೇವೆ ಎಂದು ಪಾಕ್ ವಿರುದ್ಧ ಗುಡುಗಿದ್ದಾರೆ.