ಬೆಂಗಳೂರು:ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ನಟಿಸಿದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್(Martin) ಅಕ್ಟೋಬರ್ 11ರಂದು ದೇಶಾದ್ಯಂತ ಬಿಡುಗಡೆಯಾಗಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿತ್ತು. ಸದ್ಯಕ್ಕೆ ಕರ್ನಾಟಕದಲ್ಲಿ ‘ಮಾರ್ಟಿನ್’ ಸಿನಿಮಾಗೆ(Martin Box Office Colletion) ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಉತ್ತಮ ಕಲೆಕ್ಷನ್ ಕೂಡ ಮಾಡುತ್ತಿದೆ. ಈ ಮಧ್ಯೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಬಾಬರ್ ಅಜಂ(Babar Azam) ಅವರು ಮಾರ್ಟಿನ್ ಸಿನಿಮಾ ನೋಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ.
ಹೌದು, ʼDS ಟೈಮ್ ಬಾಂಬ್ʼ ಎನ್ನುವ ಧ್ರುವ ಸರ್ಜಾ ಅಭಿಮಾನಿ ಬಳಗದ ಟ್ವೀಟರ್ ಪೇಜ್‌ನಲ್ಲಿ ಚಿತ್ರಮಂದಿರವೊಂದರಲ್ಲಿ ʼಮಾರ್ಟಿನ್’ ಸಿನಿಮಾದ ಪೋಸ್ಟರ್ ಮತ್ತು ಬಾಬರ್ ಅಜಂ ಕಾರ್ ಬಳಿ ನಿಂತಿರುವ ಫೋಟೊವೊಂದನ್ನು ಶೇರ್ ಮಾಡಿದ್ದು, ʼಮಾರ್ಟಿನ್ ಶೋ ನೋಡಲು ಬಾಬರ್ ಅಜಂ ಬಂದಿದ್ದಾರೆʼ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಸದ್ಯ ವೈರಲ್ ಆಗಿದೆ. ಅಸಲಿಗೆ ಬಾಬರ್ ಅಜಂ ಈ ಸಿನಿಮಾ ನೋಡಿದ್ದಾರಾ ಎಂಬ ಬಗ್ಗೆ ಯಾವುದೇ ಖಚಿತತೆ ಇಲ್ಲ.
Babar Azam has come to see the night show of Martin🥵#DhruvaSarja #Martin #MartinReview #MartinTheMovie #MartinFDFS #Pakistan pic.twitter.com/YRxkqLIoFK
— DS ಟೈಮ್ ಬಾಂಬ್💣🌋 (@RebelStar_P) October 11, 2024
ವಿವಿಧ ಭಾಷೆಗಳಲ್ಲಿ ತೆರೆಕಂಡ ʼಮಾರ್ಟಿನ್ʼ ಸಿನಿಮಾದ ಮೊದಲ ದಿನದ ಗಳಿಕೆ ಸುಮಾರು 6.2 ಕೋಟಿ ರೂ. ಈ ಪೈಕಿ 5.5 ಕೋಟಿ ರೂ. ಕರ್ನಾಟಕವೊಂದರಿಂದಲೇ ಹರಿದು ಬಂದಿದೆ. ಹಿಂದಿ ಆವೃತ್ತಿ 25 ಲಕ್ಷ ರೂ., ತಮಿಳು ಆವೃತ್ತಿ 5 ಲಕ್ಷ ರೂ. ಮತ್ತು ತೆಲುಗು ಆವೃತ್ತಿ 4 ಲಕ್ಷ ರೂ. ಗಳಿಸಿದೆ. ಶನಿವಾರ ಮತ್ತು ಭಾನುವಾರ ರಜಾ ದಿನವಾಗಿರುವುದರಿಂದ ಸಿನಿಮಾದ ಕಲೆಕ್ಷನ್ ಹೆಚ್ಚಾಗುವ ನಿರೀಕ್ಷೆ ಇದೆ.