ಭಾರತ ಹಾಗು ಪಾಕಿಸ್ತಾನ ನಡುವಿನ ಅಂತರಾಷ್ಟ್ರೀಯ ಜಲ ವಿವಾದದ ಕುರತು ಮಾತನಾಡಲು ಭಾರತಕ್ಕೆ ಪಾಕ್ನ ಐದು ಸದಸ್ಯರ ತಂಡವು ಮುಂದಿನ ಔಅರ ಭಾರತಕ್ಕೆ ಭೇಟಿ ನೀಡಲಿದೆ.
ಮೇ 30-31 ರಂದು ದ್ವಿಪಕ್ಷೀಯ ಮಾತುಕತೆ ನಡೆಯಲಿದ್ದು ಸಿಂಧೂ ನದಿ ನೀರು ಹಂಚಿಕೆ ಕುರಿತು ಪ್ರಸ್ತಾವನೆಯಾಗಲಿದೆ ಎಂದು ತಿಳಿದು ಬಂದಿದೆ.
ವಾಘಾ ಗಡಿ ಮೂಲಕ ಪಾಕ್ ನಿಯೋಗವು ಭಾರತಕ್ಕೆ ಬರಲಿದೆ ಎಂದು ಅಧಿಕೃತ ಸುದ್ದಿ ಮೂಲಗಳು ತಿಳಿಸಿವೆ.