ಐಸಿಸಿ ಚಾಂಪಿಯನ್ಸ್ ಟ್ರೋಫಿ (ICC champions trophy) ಲೀಗ್ ಪಂದ್ಯದಲ್ಲಿ ಮೊನ್ನೆಯಷ್ಟೇ ಭಾರತದ ವಿರುದ್ಧ ಪಾಕಿಸ್ತಾನದ (Ind v/s pak) ಹೀನಾಯ ಸೋಲು ಕಂಡಿದೆ.ಈ ಬೆನ್ನಲೇ ಪಾಕಿಸ್ತಾನ ಮಾಧ್ಯಮಗಳು ಮತ್ತು ಪಾಕ್ ಅಭಿಮಾನಿಗಳ ಹತಾಶೆ ನಗೆಪಾಟಲಿಗೆ ಈಡಾಗಿವೆ.

ಈ ಬಗ್ಗೆ ಪಾಕಿಸ್ತಾನದ ಟಿವಿ ಚಾನೆಲ್ ಡಿಬೇಟ್‌ವೊಂದರಲ್ಲಿ ಮಾಟಮಂತ್ರದ ಚರ್ಚೆ ನಡೆದಿದೆ. ಭಾರತ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣಕ್ಕೆ 22 ಮಂತ್ರವಾದಿಗಳನ್ನ ಕಳುಹಿಸಿ ಮಾಟ ಮಂತ್ರ ಮಾಡಿದೆ ಅಂತ ಚರ್ಚೆಗೆ ಬಂದಿದ್ದ ಪ್ಯಾನಲಿಸ್ಟ್ ಹೇಳಿದ್ದಾನೆ. ಈತನ ಈ ಆರೋಪ ತೀರ ಟ್ರೊಲ್ ಮತ್ತು ನಗೆಪಾಟಲಿಗೆ ಈಡಾಗಿದೆ.

ಇನ್ನು ಇದೇ ಕಾರ್ಯಕ್ರಮದಲ್ಲಿ ಮತ್ತೊಬ್ಬ ಪ್ಯಾನಲಿಸ್ಟ್ ಭಾರತ ಪಾಕಿಸ್ತಾನದಲ್ಲಿ ಪಂದ್ಯಗಳನ್ನು ಆಡಲು ನಿರಾಕರಿಸಲು ಇದೇ ಕಾರಣ ಎಂದಿದ್ದಾನೆ. ಮತ್ತೊಬ್ಬ ಪ್ಯಾನಲಿಸ್ಟ್, ಪಂದ್ಯದ ಒಂದು ದಿನ ಮೊದಲು ಏಳು ಮಂದಿ ಮಂತ್ರವಾದಿಗಳು ಮೈದಾನಕ್ಕೆ ಭೇಟಿ ನೀಡಿ ಮಾಟಮಂತ್ರ ಮಾಡಿದ್ದಾರೆ ಎಂದು ಚರ್ಚೆ ಮಾಡಿ ಜೋಕೆರ್ ಗಳಾಗಿದ್ದಾರೆ.